ಬಿಎಸ್​ಎನ್​ಎಲ್; ಸಂಕ್ರಾಂತಿಗೆ 5ಜಿ ಸೇವೆ 
ನವದೆಹಲಿ, 06 ನವೆಂಬರ್ (ಹಿ.ಸ.) : ಆ್ಯಂಕರ್ : ಖಾಸಗಿ ಟೆಲಿಕಾಂ ಸಂಸ್ಥೆಗಳ ಮಧ್ಯೆ ಗ್ರಾಹಕಸ್ನೇಹಿ ಯೋಜನೆ, ರಿಚಾರ್ಜ್ ಪ್ಯಾಕೇಜ್ ಘೋಷಿಸುತ್ತಾ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಮುನ್ನುಗ್ಗುತ್ತಿದೆ. ಜಿಯೋ, ಏರ್‌ಟೆಲ್, ವೋಡಾಫೋನ್ ಇಂಟರ್‌ನೆಟ್ ಸೇವೆ ಮಧ್ಯೆ ತೀವ್ರ ಪೈಪೋಟಿ ನೀಡಲು ಸರ್ಕಾರಿ ಸ್ವಾಮ
ಜ್ಯೋತಿರಾದಿತ್ಯ ಸಿಂಧಿಯಾ


ನವದೆಹಲಿ, 06 ನವೆಂಬರ್ (ಹಿ.ಸ.) :

ಆ್ಯಂಕರ್ : ಖಾಸಗಿ ಟೆಲಿಕಾಂ ಸಂಸ್ಥೆಗಳ ಮಧ್ಯೆ ಗ್ರಾಹಕಸ್ನೇಹಿ ಯೋಜನೆ, ರಿಚಾರ್ಜ್ ಪ್ಯಾಕೇಜ್ ಘೋಷಿಸುತ್ತಾ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಮುನ್ನುಗ್ಗುತ್ತಿದೆ. ಜಿಯೋ, ಏರ್‌ಟೆಲ್, ವೋಡಾಫೋನ್ ಇಂಟರ್‌ನೆಟ್ ಸೇವೆ ಮಧ್ಯೆ ತೀವ್ರ ಪೈಪೋಟಿ ನೀಡಲು ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ ಸಜ್ಜಾಗಿದೆ. ಇದೀಗ ತನ್ನ ವೇಗದ 5ಜಿ ಇಂಟರ್‌ನೆಟ್ ಸೇವೆ ಒದಗಿಸುವ ಯೋಜನೆಗೆ ಬೇಕಾದ ಎಲ್ಲ ಅಗತ್ಯ ಸಿದ್ಧತೆಗಳನ್ನು ಕಂಪನಿ ಪೂರ್ಣಗೊಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಬಿಎಸ್​ಎನ್​ಎಲ್​ ಬಹುಶಃ ಮುಂದಿನ ವರ್ಷ ಅಂದರೆ 2025ರಲ್ಲಿ ತನ್ನ 5ಜಿ ಸೇವೆಯನ್ನು ಪ್ರಾರಂಭಿಸುತ್ತದೆ. ಭಾರತೀಯ ಸಂಚಾರ ನಿಗಮ ಲಿಮಿಟೆಡ್​ ತನ್ನ 5ಜಿ ರೇಡಿಯೋ ಆಕ್ಸೆಸ್​ ನೆಟ್​ವರ್ಕ್​ (ಆರ್​ಎಎನ್​) ಮತ್ತು ಕೋರ್​ ನೆಟ್​ವರ್ಕ್​ 3.6 GHz ಮತ್ತು 700 MHz ಫ್ರೀಕ್ವೆನ್ಸಿ ಬ್ಯಾಂಡ್​ ಪರೀಕ್ಷೆ ಪೂರ್ಣಗೊಳಿಸಿದೆ. ಆದಷ್ಟು ಬೇಗ ದೇಶಾದ್ಯಂತ ಬಿಎಸ್​ಎನ್​​ಎಲ್​ನ 5ಜಿ ಸೇವೆಗಳು ಪ್ರಾರಂಭಗೊಳ್ಳಲಿವೆ ಎಂದು ಹೇಳಿದ್ದಾರೆ.

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ 4Gಸೇವೆಯನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರುವ ಜೊತೆಗೆ 5G ಸೇವೆ ನೀಡಲು ಯೋಜಿಸಿದೆ. ಈ ಸೇವೆ ಆರಂಭಿಸುವ ದಿನಾಂಕವನ್ನು ಕೇಂದ್ರ ಸಚಿವರ ಬಹಿರಂಗಪಡಿಸಿದ್ದಾರೆ.

ಬಿಎಸ್​ಎನ್​ಎಲ್​ ತನ್ನ 5ಜಿ ಸೇವೆಯನ್ನು ಮುಂದಿನ ವರ್ಷದ ಮಕರ ಸಂಕ್ರಾಂತಿಯೊಳಗೆ ಪ್ರಾರಂಭಿಸಬಹುದಾಗಿದೆ.ದೇಶಾದ್ಯಂತ ಸಾವಿರಾರು ಮೊಬೈಲ್ ಟವರ್‌ಗಳನ್ನು ಸ್ಥಾಪನೆ ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande