ಮನ್‌ದೀಪ್ ಜಂಗ್ರಾ ವಿಶ್ವ ಚಾಂಪಿಯನ್
ವಿಶ್ವ ಬಾಕ್ಸಿಂಗ್ ಫೆಡರೇಶನ್‌ನ ಸೂಪರ್ ಫೆದರ್‌ವೇಟ್‌ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ಮನ್‌ದೀಪ್ ಜಂಗ್ರಾ
ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ಮನ್‌ದೀಪ್ ಜಂಗ್ರಾ


ಕೇಮನ್ ಐಲ್ಯಾಂಡ್, 06 ನವೆಂಬರ್ (ಹಿ.ಸ.) :

ಆ್ಯಂಕರ್ : ಕೇಮನ್ ದ್ವೀಪದಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಫೆಡರೇಶನ್‌ನ ಸೂಪರ್ ಫೆದರ್‌ವೇಟ್ ಪಂದ್ಯಾವಳಿಯಲ್ಲಿ ಭಾರತದ ಮನ್‌ದೀಪ್ ಜಂಗ್ರಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ನಿನ್ನೆ ಬ್ರಿಟನ್‌ನ ಕಾನರ್ ಮೆಕಿಂತೋಷ್ ಅವರನ್ನು ೧೦-೦ ಅಂಕಗಳ ಅಂತರದಿಂದ ಸೋಲಿಸುವ ಮೂಲಕ ಮಂದೀಪ್ ಜಂಗ್ರಾ, ಯಾವುದೇ ವೃತ್ತಿಪರ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ವಿಶ್ವ ಚಾಂಪಿಯನ್ ಆದ ಮೊದಲ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

೨೦೧೪ರ ಗ್ಲಾಸ್ಗೋ ಆವೃತ್ತಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ ಪದಕ ಗೆದ್ದಿದ್ದ ಮಂದೀಪ್, ಇದುವರೆಗೆ ತಮ್ಮ ವೃತ್ತಿಪರ ಜೀವನದಲ್ಲಿ ಕೇವಲ ಒಂದು ಬಾರಿ ಸೋಲನುಭವಿದ್ದಾರೆ. ಅವರು ತಮ್ಮ ೧೨ ಪಂದ್ಯಗಳಲ್ಲಿ ೧೧ ರಲ್ಲಿ ಗೆದ್ದಿದ್ದು, ಇದರಲ್ಲಿ ಏಳು ನಾಕೌಟ್ ಹಂತದ ವಿಜಯಗಳಾಗಿವೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande