ಮಹಿಳಾ ಕ್ರಿಕೆಟ್ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 24 ರನ್‌ಗಳ ಜಯ
ಬ್ರಿಸ್ಟಲ್, 02 ಜುಲೈ (ಹಿ.ಸ.) : ಆ್ಯಂಕರ್ : ಎರಡನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್‌ ವಿರುದ್ಧ 24 ರನ್‌ಗಳ ಜಯ ಗಳಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 181 ರನ್ ಗಳಿಸಿತು. ಜೆಮಿಮಾ ರೊಡ್ರಿಗಸ್ (63) ಮತ್ತು ಅಮನ್‌ಜೋತ
Wc


ಬ್ರಿಸ್ಟಲ್, 02 ಜುಲೈ (ಹಿ.ಸ.) :

ಆ್ಯಂಕರ್ : ಎರಡನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್‌ ವಿರುದ್ಧ 24 ರನ್‌ಗಳ ಜಯ ಗಳಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 181 ರನ್ ಗಳಿಸಿತು. ಜೆಮಿಮಾ ರೊಡ್ರಿಗಸ್ (63) ಮತ್ತು ಅಮನ್‌ಜೋತ್ ಕೌರ್ (63*) ಅರ್ಥಪೂರ್ಣ ಇನ್ನಿಂಗ್ಸ್ ಆಡುವ ಮೂಲಕ ಉತ್ತಮ ಮೊತ್ತಕ್ಕೆ ದಾರಿ ಹಾಕಿದರು.

ಇಂಗ್ಲೆಂಡ್ ತಂಡ 157/7 ರನ್‌ಗಳಿಗೆ ಸೀಮಿತವಾಯಿತು. ಟ್ಯಾಮಿ ಬ್ಯೂಮಾಂಟ್ 54 ರನ್ ಗಳಿಸಿ ಹೋರಾಟ ನೀಡಿದರೂ, ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ಎಸೆತದಿಂದ ಗುರಿ ತಲುಪಲು ಸಾಧ್ಯವಾಗಲಿಲ್ಲ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande