ಮುಂಬೈ, 05 ನವೆಂಬರ್ (ಹಿ.ಸ.) :
ಆ್ಯಂಕರ್ : ಜೀವಂತವಾಗಿರಲು ಬಯಸಿದರೆ ದೇವಸ್ಥಾನದಲ್ಲಿ ಕ್ಷಮೆಯಾಚಿಸಿ ಇಲ್ಲವೇ 5 ಕೋಟಿ ಹಣ ಕೊಡಿ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೆ ದರೋಡೆಕೋರ ಬಿಷ್ಣೋಯ್ ರವರ ತಂಡದಿಂದ ಬೆದರಿಕೆ ಬಂದಿದೆ.
ಮುಂಬೈ ಸಂಚಾರ ಪೊಲೀಸ್ ಸಹಾಯವಾಣಿಗೆ ಮಧ್ಯರಾತ್ರಿ ಈ ಬೆದರಿಕೆ ಕರೆ ಬಂದಿದ್ದು, ನಟನಿಗೆ 5 ಕೋಟಿ ರೂ ನೀಡುವಂತೆ ಬೇಡಿಕೆ ಇರಿಸಲಾಗಿದೆ. ಬೆದರಿಕೆ ಕರೆ ಮಾಡಿರುವ ವ್ಯಕ್ತಿ ತನ್ನನ್ನು ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ರವರ ಸಹೋದರ ಎಂದು ಗುರುತಿಸಿಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಲ್ಮಾನ್ ಖಾನ್ ಜೀವಂತವಾಗಿರಬೇಕು ಎಂದರೆ, ಬಾಲಿವುಡ್ ನಟ ನಮ್ಮ ಬಿಷ್ಣೋಯಿ ಸಮುದಾಯದ ದೇಗುಲಕ್ಕೆ ತೆರಳಿ ಕ್ಷಮೆ ಕೋರಬೇಕು ಅಥವಾ 5 ಕೋಟಿ ರೂಪಾಯಿ ನೀಡಬೇಕು. ಈ ಎರಡನ್ನೂ ಮಾಡಲು ಮುಂದಾಗದಿದ್ದರೆ, ಕೊಲೆ ಮಾಡುತ್ತೇವೆ. ನಮ್ಮ ತಂಡ ಇನ್ನೂ ಸಕ್ರಿಯವಾಗಿದೆ ಎಂದು ಸಂದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಕರೆ ಬಳಿಕ ಸಲ್ಮಾನ್ ಖಾನ್‌ಗೆ ಮತ್ತಷ್ಟು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್