₹10 ನಾಣ್ಯ ಸಮಸ್ಯೆ ಈಗಲೂ ಜೀವಂತ
ಬೆಂಗಳೂರು, 05 ನವೆಂಬರ್ (ಹಿ.ಸ.) : ಆ್ಯಂಕರ್ : ಹತ್ತು ರೂಪಾಯಿ ನಾಣ್ಯವನ್ನು ಜನ ನಿರ್ಭೀತಿಯಿಂದ ಬಳಸಬಹುದು ಎಂದು ಆರ್‌ಬಿಐ ಮತ್ತು ವಿವಿಧ ಬ್ಯಾಂಕ್‌ಗಳು ಪದೇ ಪದೇ ಸ್ಪಷ್ಟಪಡಿಸುತ್ತಿದ್ದರೂ ಅದರ ಚಲಾವಣೆ ಸಮಸ್ಯೆ ಈಗಲೂ ಇದೆ. ಭಾರತದಲ್ಲಿ ₹10 ನಾಣ್ಯಗಳನ್ನು ಸ್ವೀಕರಿಸುವುದಕ್ಕೆ ಸಂಬಂಧಿಸಿದಂತೆ ಇರುವ ಸಮಸ್
₹10 ನಾಣ್ಯ ಸಮಸ್ಯೆ ಈಗಲೂ ಜೀವಂತ


ಬೆಂಗಳೂರು, 05 ನವೆಂಬರ್ (ಹಿ.ಸ.) :

ಆ್ಯಂಕರ್ : ಹತ್ತು ರೂಪಾಯಿ ನಾಣ್ಯವನ್ನು ಜನ ನಿರ್ಭೀತಿಯಿಂದ ಬಳಸಬಹುದು ಎಂದು ಆರ್‌ಬಿಐ ಮತ್ತು ವಿವಿಧ ಬ್ಯಾಂಕ್‌ಗಳು ಪದೇ ಪದೇ ಸ್ಪಷ್ಟಪಡಿಸುತ್ತಿದ್ದರೂ ಅದರ ಚಲಾವಣೆ ಸಮಸ್ಯೆ ಈಗಲೂ ಇದೆ. ಭಾರತದಲ್ಲಿ ₹10 ನಾಣ್ಯಗಳನ್ನು ಸ್ವೀಕರಿಸುವುದಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ಈ ವರದಿ ವಿವರಿಸುತ್ತದೆ.

ಕೆಲವು ವ್ಯಾಪಾರಸ್ಥರು ಹತ್ತು ರೂಪಾಯಿ ನಾಣ್ಯಗಳನ್ನು ಕೊಟ್ಟರೆ ಅವರೂ ತೆಗೆದುಕೊಳ್ಳುವುದಿಲ್ಲ. ಕಿರಾಣಿ ಅಂಗಡಿಗೆ ಹೋಗಿ 10 ರೂಪಾಯಿ ನಾಣ್ಯ ಕೊಟ್ಟರೆ ಇದು ನಡೆಯಲ್ಲ ಅಂತಾ ವಾಪಸ್​ ಕಳುಹಿಸುತ್ತಾರೆ. ಪೆಟ್ರೋಲ್ ಬಂಕ್ ಇರಲಿ, ಚಹಾದ ಅಂಗಡಿ ಇರಲಿ 10 ರೂಪಾಯಿ ನಾಣ್ಯ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ.ಆದರೆ ಮಾರುಕಟ್ಟೆಯಲ್ಲಿ ಸುಕ್ಕುಗಟ್ಟಿದ ಮತ್ತು ಹರಿದ ನೋಟುಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಆದರೆ ಹತ್ತು ರೂಪಾಯಿ ನಾಣ್ಯಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ನಗದು ಹಾಗೂ ಚಿಲ್ಲರೆ ಸಮಸ್ಯೆ ಉಂಟಾಗುತ್ತಿದೆ.

ಈ ಹಿಂಜರಿಕೆಗೆ ಕಾರಣ ವದಂತಿಗಳು ಮತ್ತು ಅವುಗಳ ಕಾನೂನುಬದ್ಧತೆ, ಗಾತ್ರ ಮತ್ತು ತೂಕದ ಬಗ್ಗೆ ಇರುವ ಅನುಮಾನಗಳು. ತಮಿಳುನಾಡಿನಲ್ಲಿ ₹10 ನಾಣ್ಯಗಳನ್ನು ಸ್ವೀಕರಿಸುವುದಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ. ₹10 ನಾಣ್ಯಗಳನ್ನು ಪರಿಚಯಿಸಿದಾಗಿನಿಂದ, ಕಾನೂನುಬದ್ಧವಾಗಿದ್ದರೂ, ಅನೇಕ ನಾಗರಿಕರು ಅವುಗಳನ್ನು ಬಳಸಲು ಹಿಂಜರಿಯುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ 10 ರೂಪಾಯಿ ನಾಣ್ಯ ಚಲಾವಣೆ ಎಂಬ ತಪ್ಪು ಕಲ್ಪನೆಗಳು ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಈ ರೀತಿ ಯಾವುದೇ ಕ್ರಮಕೈಗೊಂಡಿಲ್ಲ ಅಂತ ಆರ್‌ಬಿಐ ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದರೂ ಕೂಡ ಚಿಲ್ಲರೆ ಅಂಗಡಿಯಿಂದ ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳಲ್ಲೂ ಇವುಗಳನ್ನು ಸ್ವೀಕರಿಸುತ್ತಿಲ್ಲ ಎಂಬ ದೂರುಗಳನ್ನು ಕೇಳುತ್ತೇವೆ.

ಈ ಕುರಿತಂತೆ ಸ್ಪಷ್ಟನೆ ನೀಡಿರುವ ಬ್ಯಾಂಕ್ ಮ್ಯಾನೇಜರ್, ಭಾರತೀಯ ರಿಸರ್ವ್ ಬ್ಯಾಂಕ್ 2005 ಮತ್ತು 2019 ರ ನಡುವೆ ಹತ್ತು ರೂಪಾಯಿ ನಾಣ್ಯಗಳನ್ನು ಪರಿಚಯಿಸಿತ್ತು. ಇವು ವಿವಿಧ ರೂಪಗಳಲ್ಲಿ ಜನರನ್ನು ತಲುಪಿವೆ. ಆರ್‌ಬಿಐ ಹಲವು ಬಾರಿ ಹೇಳಿದೆ. ಹತ್ತು ರೂಪಾಯಿಯ ನಾಣ್ಯಗಳು ಚಲಾವಣೆ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳನ್ನು ನಂಬಬೇಡಿ. 10 ರೂಪಾಯಿ ಕಾಯಿನ್ ಗೆ ಚಿಲ್ಲರೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಹಲವು ವ್ಯಾಪಾರಿಗಳು ಇವುಗಳನ್ನು ನಿರಾಕರಿಸುತ್ತಿದ್ದಾರೆ ಅಷ್ಟೇ ಎಂದು ತಿಳಿಸಿದ್ದಾರೆ.

ಯಾವುದೇ ಬ್ಯಾಂಕ್ ಗೆ ಹೋಗಿ ನೀವು 10 ನಾಣ್ಯಗಳನ್ನು ನೀಡಿದರು ತೆಗೆದುಕೊಳ್ಳುತ್ತಾರೆ. ಒಂದೊಮ್ಮೆ ಬ್ಯಾಂಕ್ ನಲ್ಲಿ ಈ ನಾಣ್ಯ ತೆಗೆದುಕೊಳ್ಳಲಿಲ್ಲ ಎಂದರೇ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಅವರ ವಿರುದ್ಧ ದೂರು ದಾಖಲಿಸಬಹುದು ಎಂದು ಯೂನಿಯನ್ ಬ್ಯಾಂಕ್ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ. ಚಿಲ್ಲರೆ ಅಂಗಡಿ ಮತ್ತು ಸಣ್ಣ ಹೋಟೆಲ್‌ಗಳಲ್ಲಿ ಚಿಲ್ಲರೆ ಇಲ್ಲದೇ ಪರದಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆರ್ ಬಿಐ ನಿಯಮದ ಪ್ರಕಾರ ರೂ.10 ನಾಣ್ಯಗಳು ಮಾನ್ಯವಾಗಿದ್ದು, ಯಾರೂ ತಿರಸ್ಕರಿಸಬಾರದು. ನಾಣ್ಯಗಳನ್ನು ಸ್ವೀಕರಿಸದಿರುವ ಬಗ್ಗೆ ಯಾರಾದರೂ ದೂರು ನೀಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande