ನವದೆಹಲಿ, 04 ನವೆಂಬರ್(ಹಿ.ಸ.) :
ಆ್ಯಂಕರ್ : ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರಿ ಬೇಡಿಕೆಯನ್ನು ಹೆಚ್ಚಾಗುತ್ತಿದೆ. ಪ್ರಪಂಚದ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳ ರೀತಿಯಲ್ಲೇ ಭಾರತದಲ್ಲೂ ಐಷಾರಾಮಿ ಕಾರು ಬ್ರಾಂಡ್‌ಗಳು ತಮ್ಮ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಇದೀಗ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.ಇಂದು ಪ್ರದರ್ಶನಗೊಳ್ಳಲಿದೆ.
ಇವಿಎಕ್ಸ್ ಅನ್ನು ಇಟಲಿಯ ಮಿಲನ್ ನಗರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅನಾವರಣಗೊಳಿಸಲಾಗುವುದು. ಸುಜುಕಿ ಪಾಲಿಗೆ ಈ ಬ್ಯಾಟರಿ ಚಾಲಿತ ಕಾರು ಭಾರತಕ್ಕೆ ಮಾತ್ರವಲ್ಲ ಜಾಗತಿಕ ಮಾರುಕಟ್ಟೆಗೂ ಪ್ರಮುಖವಾಗಿದೆ. ಭಾರತದಲ್ಲಿ ಇದು ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಕಂಪನಿಗಳ ಎಲೆಕ್ಟ್ರಿಕ್ ಕಾರುಗಳೊಂದಿಗೆ ಸ್ಪರ್ಧಿಸಲಿದೆ.
ಮಿಲನ್‌ನಲ್ಲಿ ಪ್ರಸ್ತುತಪಡಿಸಲಾಗುವ ಮಾರುತಿ ಇವಿಎಕ್ಸ್ ಅದರ ಅಂತಿಮ ನಿರ್ಮಾಣ-ಆವೃತ್ತಿಯಾಗಿದೆ. ಈ ಮಾದರಿಯನ್ನು ಮಾತ್ರ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ ತಯಾರಿಸಲಾಗಿರುವ ಮಾರುತಿ ಇವಿಎಕ್ಸ್‌ನ ಹೆಚ್ಚಿನ ಭಾಗವನ್ನು ರಫ್ತು ಮಾಡಿದೆ. ಭಾರತದಲ್ಲಿ ತಯಾರಾದ ಈ ಎಲೆಕ್ಟ್ರಿಕ್ ಎಸ್‌ಯುವಿ ಯುರೋಪ್ ಮತ್ತು ಜಪಾನ್‌ಗೆ ರಫ್ತಾಗಲಿದೆ.
500 ಕಿಲೋಮೀಟರ್‌ಗಳ ಏಕ ಚಾರ್ಜ್ ಶ್ರೇಣಿ
ಮಾರುತಿ ಸುಜುಕಿ ಇವಿಎಕ್ಸ್ ನ ವಿಶೇಷಣಗಳನ್ನು ಇನ್ನೂ ಸಂಪೂರ್ಣವಾಗಿ ಬಹಿರಂಗಪಡಿಸಲಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಮಾರುತಿಯ ಹೊಸ ಎಲೆಕ್ಟ್ರಿಕ್ ಕಾರನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಬಹುದು – 48ಕಿ.ವಾ.ಗಂ ಮತ್ತು 60ಕಿ.ವಾ.ಗಂ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಈ ಕಾರು ಸುಮಾರು 500 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್