ಚಳಿಗಾಲದಲ್ಲಿ ಆರೋಗ್ಯಕ್ಕೆ ಉತ್ತಮ ಶುಂಠಿ ಸೂಪ್
ಹುಬ್ಬಳ್ಳಿ, 29 ನವೆಂಬರ್ (ಹಿ.ಸ.) : ಆ್ಯಂಕರ್ : ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಹಾಗೂ ಆರೋಗ್ಯ ಸಮಸ್ಯೆಗಳಿಂದ ಪಾರಾಗಲು ಕ್ಯಾರೆಟ್ ಶುಂಠಿ ಸೂಪ್ ಉತ್ತಮ ಆಯ್ಕೆಯಾಗಿದೆ. ಅಡುಗೆ ಮನೆಯಲ್ಲಿರುವ ಕೆಲವು ಸಾಮಗ್ರಿಗಳನ್ನು ಬಳಸಿ ಈ ಸೂಪ್ ತಯಾರಿಸಿ ಸೇವಿಸಿದರೆ ದೇಹವು ಬೆಚ್ಚರಿಗಿರುವುದರೊಂದಿಗೆ ಆರೋಗ್
Soop


ಹುಬ್ಬಳ್ಳಿ, 29 ನವೆಂಬರ್ (ಹಿ.ಸ.) :

ಆ್ಯಂಕರ್ : ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಹಾಗೂ ಆರೋಗ್ಯ ಸಮಸ್ಯೆಗಳಿಂದ ಪಾರಾಗಲು ಕ್ಯಾರೆಟ್ ಶುಂಠಿ ಸೂಪ್ ಉತ್ತಮ ಆಯ್ಕೆಯಾಗಿದೆ. ಅಡುಗೆ ಮನೆಯಲ್ಲಿರುವ ಕೆಲವು ಸಾಮಗ್ರಿಗಳನ್ನು ಬಳಸಿ ಈ ಸೂಪ್ ತಯಾರಿಸಿ ಸೇವಿಸಿದರೆ ದೇಹವು ಬೆಚ್ಚರಿಗಿರುವುದರೊಂದಿಗೆ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.

ಕ್ಯಾರೆಟ್ ಶುಂಠಿ ಸೂಪ್ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಕ್ಯಾರೆಟ್, ಪ್ರಮಾಣಕ್ಕೆ ತಕ್ಕಂತೆ ಶುಂಠಿ, ಒಂದು ಕಪ್ ತರಕಾರಿಗಳು,ಅರ್ಧ ಕಪ್ ಕಿತ್ತಳೆ ರಸ,ಸ್ವಲ್ಪ ಕರಿಮೆಣಸಿನ ಪುಡಿ, ಎರಡು ಚಮಚ ಅಡುಗೆ ಎಣ್ಣೆ,ರುಚಿಗೆ ತಕ್ಕಷ್ಟು ಉಪ್ಪು

ಎಲ್ಲವನ್ನೂ ಸೇರಿಸಿಬೇಕು.

ಕ್ಯಾರೆಟ್ ಶುಂಠಿ ಸೂಪ್ ತಯಾರಿಸು ವಿಧಾನ

ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಯಾಗುತ್ತಿದ್ದಂತೆ ಈರುಳ್ಳಿ ಮತ್ತು ಶುಂಠಿ ಹಾಕಿ ಹುರಿದುಕೊಳ್ಳಿ. ನಂತರ ಕ್ಯಾರೆಟ್ ಹಾಕಿ, ಅಗತ್ಯವಿದ್ದಷ್ಟು ನೀರು ಹಾಗೂ ರುಚಿಗೆ ತಕ್ಕ ಉಪ್ಪು ಬೆರೆಸಿ ಚನ್ನಾಗಿ ಬೇಯಿಸಬೇಕು.

ನೀರಿನಂಶ ಕಡಿಮೆಯಾಗುವವರೆಗೆ ಕುದಿಸಬೇಕು ನಂತರ ಕಿತ್ತಳೆ ರಸವನ್ನು ಸೇರಿಸಿ ಕುದಿಸಬೇಕು. ನಂತರ ಬೇಯಿಸಿಟ್ಟ ಮಿಶ್ರಣವನ್ನು ರುಬ್ಬಿಕೊಳ್ಳಬೇಕು, ರುಬ್ಬಿದ ಮಿಶ್ರಣವನ್ನು ಕುದಿಸಿ ಕರಿಮೆಣಸಿನ ಪುಡಿ ಸೇರಿಸಿದರೆ ಕ್ಯಾರೆಟ್ ಶುಂಠಿ ಸೂಪ್ ಸವಿಯಲು ಸಿದ್ಧವಾಗಲಿದೆ.

ಈ ಸೂಪ್ ಬಿಸಿ ಬಿಸಿಯಾಗಿರುವಾಗಲೇ ಕುಡಿಯುವುದರಿಂದ ಬಾಯಲ್ಲಿ ರುಚಿ ಹೆಚ್ಚಾಗುವುದಲ್ಲದೆ ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ದೂರವಿರಬಹುದು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande