ಬೆಂಗಳೂರು, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಗಮನ ಸೆಳೆದಿರುವ ಚಂದನಾ ಅನಂತಕೃಷ್ಣ ಇದೀಗ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದಾರೆ. ನಟಿ ಉದ್ಯಮಿ ಪ್ರತ್ಯಕ್ಷ್ ಅವರ ಕೈ ಹಿಡಿದಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ನಟಿಯ ಮದುವೆ ಜರುಗಿದೆ.
ಈ ಸಂಭ್ರಮದಲ್ಲಿ ಕಿರುತೆರೆಯ ಕಲಾವಿದರು ಭಾಗಿಯಾಗಿ ಹೊಸ ಜೋಡಿಗೆ ಶುಭಹಾರೈಸಿದ್ದಾರೆ.
ಗುರುಹಿರಿಯರು ನಿಶ್ಚಿಯಿಸಿದ ಮದುವೆ ಇದಾಗಿದ್ದು, ಇತ್ತೀಚೆಗೆ ಕುಟುಂಬಸ್ಥರು ಸಮ್ಮುಖದಲ್ಲಿ ನಟಿಯ ನಿಶ್ಚಿತಾರ್ಥ ಸರಳವಾಗಿ ನಡೆದಿತ್ತು. ಇಂದು ಅದ್ಧೂರಿಯಾಗಿ ಚಂದನಾ ಮತ್ತು ಪ್ರತ್ಯಕ್ಷ್ ಮದುವೆ ನಡೆದಿದೆ.
ಚಂದನಾ ಮೂಲತ ತುಮಕೂರಿನವರು. ಪ್ರಾಥಮಿಕ ಶಿಕ್ಷಣವನ್ನು ತುಮಕೂರಿನಲ್ಲಿಯೇ ಮುಗಿಸಿ, ಆಳ್ವಾಸ್‌ನಲ್ಲಿ ಪದವಿ ಪಡೆದರು. ಅದಾದ ಬಳಿಕ ನಟನೆಯತ್ತ ಹೊರಳಿದರು. ಇತ್ತ ಪ್ರತ್ಯಕ್ಷ್, ಕನ್ನಡದ ಖ್ಯಾತ ನಟ ಉದಯ್ ಹುತ್ತಿನಗದ್ದೆ ಅವರ ಸುಪುತ್ರ. ಕನ್ನಡದಲ್ಲಿ ಶುಭ ಮಿಲನ, ಜಯಭೇರಿ, ಉದ್ಭವ, ಅಗ್ನಿಪರ್ವ ಸೇರಿ ಹಲವು ಸಿನಿಮಾಗಳಲ್ಲಿ ಉದಯ್ ನಟಿಸಿದ್ದಾರೆ. ಆದರೆ, ಅಪ್ಪನಂತೆ ಮಗ ಪ್ರತ್ಯಕ್ಷ್ ಸಿನಿಮಾರಂಗಕ್ಕೆ ಬರಲಿಲ್ಲ. ಮೂಲತಃ ಚಿಕ್ಕಮಗಳೂರಿನವರಾದ ಪ್ರತ್ಯಕ್ಷ್, ಕಾಫಿ ಎಸ್ಟೇಟ್ ಹೊಂದಿದ್ದಾರೆ. ಆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್