ಮತ್ತೊಮ್ಮೆ ಎಸ್ ಬಿಐ ಗ್ರಾಹಕರಿಗೆ ನಕಲಿ ಸಂದೇಶದ ಹಾವಳಿ
ಮುಂಬೈ, 28 ನವೆಂಬರ್ (ಹಿ.ಸ.) : ಆ್ಯಂಕರ್ : ಕ್ಯೂಆರ್ ಕೋಡ್ ಇರುವ ಹೊಸ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ವಿತರಿಸಲಿದೆ. ಹಳೆಯ ಪ್ಯಾನ್ ಕಾರ್ಡ್ ಬದಲು ಹೊಸ ಕಾರ್ಡ್ ಪಡೆಯಬೇಕು ಎನ್ನುವ ಸುದ್ದಿ ಇದೆ. ಇದರ ಬೆನ್ನಲ್ಲೇ ವಂಚಕರು ನಕಲಿ ಮೆಸೇಜ್​ಗಳ ಮೂಲಕ ಅಮಾಯಕರನ್ನು ಯಾಮಾರಿಸುವ ಕೆಲಸ ಮಾಡುತ್ತಿ
Beware of Fake message PAN card upgrade, Cheaters use SBI name


ಮುಂಬೈ, 28 ನವೆಂಬರ್ (ಹಿ.ಸ.) :

ಆ್ಯಂಕರ್ : ಕ್ಯೂಆರ್ ಕೋಡ್ ಇರುವ ಹೊಸ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ವಿತರಿಸಲಿದೆ. ಹಳೆಯ ಪ್ಯಾನ್ ಕಾರ್ಡ್ ಬದಲು ಹೊಸ ಕಾರ್ಡ್ ಪಡೆಯಬೇಕು ಎನ್ನುವ ಸುದ್ದಿ ಇದೆ. ಇದರ ಬೆನ್ನಲ್ಲೇ ವಂಚಕರು ನಕಲಿ ಮೆಸೇಜ್​ಗಳ ಮೂಲಕ ಅಮಾಯಕರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ.

ಹಲವಾರು ಬ್ಯಾಂಕ್ ಗ್ರಾಹಕರು 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ' ನಿಂದ ತಮ್ಮ ಯೋನೋ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿಸುವ ಸಂದೇಶವನ್ನು ಸ್ವೀಕರಿಸಿದ್ದಾರೆ ಮತ್ತು ಅವರು ತಮ್ಮ ಎಸ್ ಬಿ ಐ ಯೋನೋ ಖಾತೆಯನ್ನು ಪುನಃ ಸಕ್ರಿಯಗೊಳಿಸಲು ತಮ್ಮ ಪ್ಯಾನ್ ಶಾಶ್ವತ ಖಾತೆ ಸಂಖ್ಯೆಯನ್ನು ನವೀಕರಿಸಬೇಕಾಗಿದೆʼ ಎಂಬ ಸಂದೇಶ ಪಡೆದಿರುತ್ತಾರೆ. ಆದರೆ, ಅಂತಹ ಸಂದೇಶವನ್ನು ಸ್ವೀಕರಿಸಿದವರಲ್ಲಿ ನೀವೂ ಒಬ್ಬರಾಗಿದ್ದರೆ, ಸಂದೇಶವು 'ನಕಲಿ' ಎಂಬ ಅರಿವು ನಿಮಗಿರಲಿ.

ಬ್ಯಾಂಕ್ ಗ್ರಾಹಕರ ಹಣಕ್ಕೆ ಕನ್ನ ಹಾಕಲು ಇತ್ತೀಚಿನ ದಿನಗಳಲ್ಲಿ ವಂಚಕರು ಆನ್​ಲೈನ್ ತಾಣಗಳ ಮೂಲಕ ಹೊಸ ಹೊಸ ಹಾದಿಗಳನ್ನು ಹುಡುಕುತ್ತಿರುತ್ತಾರೆ. ಎಸ್​ಬಿಐ ಯೊನೊ ಖಾತೆಗೆ ಸಂಬಂಧಿಸಿದ ಸಂದೇಶವೊಂದು ಇತ್ತೀಚೆಗೆ ಹರಿದಾಡಿದ್ದು, ಅದು ಸುಳ್ಳು ಮಾಹಿತಿ ಎಂಬುದನ್ನು ಸರ್ಕಾರದ ಅಧಿಕೃತ ಫ್ಯಾಕ್ಟ್ ಚೆಕರ್ ತಾಣ ‘ಪಿಐಬಿ ಫ್ಯಾಕ್ಟ್​ಚೆಕ್’ ಬಯಲಿಗೆಳೆದಿದೆ. ಸುಳ್ಳು ಹಾಗೂ ನಕಲಿ ಸಂದೇಶಗಳ ಬಗ್ಗೆ ಗ್ರಾಹಕರು ಎಚ್ಚರದಿಂದ ಇರಬೇಕು. ಅಪರಿಚಿತ ಮೂಲಗಳಿಂದ ಬಂದ ಸಂದೇಶಗಳನ್ನು ನಂಬಬಾರದು ಮತ್ತು ಲಿಂಕ್​ಗಳನ್ನು ಕ್ಲಿಕ್​ ಮಾಡಬಾರದು. ಇದರಿಂದ ಹಣ ಕಳೆದುಕೊಳ್ಳುವ ಅಪಾಯವಿದೆ ಎಂದು ‘ಪಿಐಬಿ ಫ್ಯಾಕ್ಟ್​ಚೆಕ್’ ಎಚ್ಚರಿಕೆ ನೀಡಿದೆ.

ನಕಲಿ ಸಂದೇಶದಲ್ಲಿ ಏನಿದೆ?

ಅನೇಕ ಗ್ರಾಹಕರ ಮೊಬೈಲ್ ಗೆ ಎಸ್ ಬಿಐ ಹೆಸರಿನಲ್ಲಿ ಸಂದೇಶ ಬಂದಿದೆ. ಅದರಲ್ಲಿ 'ಪ್ರಿಯ ಗ್ರಾಹಕರೇ, ನಿಮ್ಮ ಎಸ್ ಬಿಐ ಯೋನೋ ಖಾತೆಯನ್ನು ಇಂದು ಕಡಿತ ಮಾಡಲಾಗಿದೆ. ಈಗಲೇ ಸಂಪರ್ಕಿಸಿ ಹಾಗೂ ನಿಮ್ಮ ಪ್ಯಾನ್ ಸಂಖ್ಯೆಯನ್ನು ಈ ಕಳಗಿನ ಲಿಂಕ್ ನಲ್ಲಿ ನವೀಕರಿಸಿರಿ ' ಎಂದಿದೆ. ಈ ಸಂದೇಶದ ಜೊತೆಗೆ ಒಂದು ಅನುಮಾನ ಮೂಡಿಸುವ ಲಿಂಕ್ ಬಂದಿದೆ. ಇದರಲ್ಲಿ ಕೂಡ ಸಂದೇಶ ಕಳುಹಿಸಿದವರ ಹೆಸರಿದೆ.

‘ಯೊನೊ ಖಾತೆ ಬ್ಲಾಕ್ ಆಗಿದೆ ಎಂಬ ಸಂದೇಶ ಎಸ್​ಬಿಐ ಕಚೇರಿ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಬರುತ್ತದೆ. ಇ-ಮೇಲ್ ಅಥವಾ ಎಸ್​ಎಂಎಸ್ ಮೂಲಕ ಇಂಥ ಸಂದೇಶದ ಬಂದಲ್ಲಿ ಪ್ರತಿಕ್ರಿಯಿಸಬೇಡಿ. ಬ್ಯಾಂಕಿಂಗ್ ಮಾಹಿತಿಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಇಂಥ ಸಂದೇಶ ನಿಮಗೆ ಬಂದಲ್ಲಿ ತಕ್ಷಣವೇ report.phishing@sbi.co.in ಗೆ ಮೇಲ್ ಮಾಡಿ’ ಎಂದು ‘ಪಿಐಬಿ ಫ್ಯಾಕ್ಟ್​ಚೆಕ್’ ಸಲಹೆ ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande