ಹುಬ್ಬಳ್ಳಿ, 26 ನವೆಂಬರ್ (ಹಿ.ಸ.):
ಆ್ಯಂಕರ್:ಯುವ ಸಮೂಹ ಮಾದಕ ವ್ಯಸನದಿಂದ ದೂರವಿರುವಂತೆ ಚಿತ್ರನಟ ಶಿವರಾಜಕುಮಾರ ಕರೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಪೋಲಿಸ ಇಲಾಖೆ ಹಾಗೂ ಕೆಎಲ್ ಇ ಸಂಸ್ಥೆ ವತಿಯಿಂದ ಆಯೊಜಿಸಿದ್ದ ಮಾದಕ ವ್ಯಸನ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗುವುದರಿಂದ ಮುಂದಿನ ಭವಿಷ್ಯ ಹಾಳಾಗಲಿದೆ ಎಂದರು.ಮಾದಕ ವ್ಯಸನಕ್ಕೆ ದಾಸರಾಗುವ ಬದಲು ವಿದ್ಯೆಯ ಕಡೆ ಹೆಚ್ಚು ಗಮನಕೊಟ್ಟು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಪೊಲಿಸ್ ಆಯುಕ್ತ ಎನ್.ಶಶಿಕುಮಾರ,ಕೆಎಲ್ಇ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಅಶೋಕ ಶೆಟ್ಟರ್, ಗೀತಾ ಶಿವಕುಮಾರ್ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa