ರೋಮ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಯ ಹೊಸ ಕಟ್ಟಡ 
ರೋಮ್‌, 25 ನವೆಂಬರ್(ಹಿ.ಸ.): ಆ್ಯಂಕರ್ : ಭಾರತವು ಇಟಲಿಯನ್ನು ಪ್ರಮುಖ ಪಾಲುದಾರ, ಯುರೋಪ್‌ನಲ್ಲಿ ನಿರ್ಣಾಯಕ ಮಿತ್ರ ಮತ್ತು ಮೆಡಿಟರೇನಿಯನ್‌ನಲ್ಲಿ ಅತ್ಯಂತ ಪ್ರಭಾವಶಾಲಿ ದೇಶ ಎಂದು ಪರಿಗಣಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್.ಜೈಶಂಕರ್ ಹೇಳಿದ್ದಾರೆ. ರೋಮ್‌ನಲ್ಲಿ ಭಾರತೀಯ ರಾಯಭಾ
S Jaishankar


ರೋಮ್‌, 25 ನವೆಂಬರ್(ಹಿ.ಸ.):

ಆ್ಯಂಕರ್ : ಭಾರತವು ಇಟಲಿಯನ್ನು ಪ್ರಮುಖ ಪಾಲುದಾರ, ಯುರೋಪ್‌ನಲ್ಲಿ ನಿರ್ಣಾಯಕ ಮಿತ್ರ ಮತ್ತು ಮೆಡಿಟರೇನಿಯನ್‌ನಲ್ಲಿ ಅತ್ಯಂತ ಪ್ರಭಾವಶಾಲಿ ದೇಶ ಎಂದು ಪರಿಗಣಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್.ಜೈಶಂಕರ್ ಹೇಳಿದ್ದಾರೆ.

ರೋಮ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಯ ಹೊಸ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತಾವಿತ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಕುರಿತು ಉಲ್ಲೇಖಿಸಿದ ಡಾ. ಎಸ್.ಜೈಶಂಕರ್, ಈ ಸಂಪರ್ಕ ಕಾರಿಡಾರ್ ಯುರೋಪ್ ಮತ್ತು ಏಷ್ಯಾದ ನಡುವೆ ದೊಡ್ಡ ಬದಲಾವಣೆ ತರಲಿದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande