ಮಲೇಷ್ಯಾ-ಭಾರತದ ರಕ್ಷಣಾ ಸಮಿತಿ ಸಭೆ
ವಿಯೆಂಟೈನ್‌, 21 ನವೆಂಬರ್ (ಹಿ.ಸ.) : ಆ್ಯಂಕರ್ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ೧೧ನೇ ಆಸಿಯಾನ್ ರಕ್ಷಣಾ ಸಚಿವರ ನೇಪಥ್ಯದಲ್ಲಿ ವಿಯೆಂಟೈನ್‌ನಲ್ಲಿ ಚೀನಾ, ಲಾವೋಸ್ ಮತ್ತು ಮಲೇಷ್ಯಾದ ತಮ್ಮ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ಈ ಸಭೆಯಲ್ಲಿ ಭಾಗವಹಿಸಲು ಮತ್ತು ಪ್ರಾದೇಶಿಕ
Defence Minister Rajnath Singh today held bilateral meeting


ವಿಯೆಂಟೈನ್‌, 21 ನವೆಂಬರ್ (ಹಿ.ಸ.) :

ಆ್ಯಂಕರ್ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ೧೧ನೇ ಆಸಿಯಾನ್ ರಕ್ಷಣಾ ಸಚಿವರ ನೇಪಥ್ಯದಲ್ಲಿ ವಿಯೆಂಟೈನ್‌ನಲ್ಲಿ ಚೀನಾ, ಲಾವೋಸ್ ಮತ್ತು ಮಲೇಷ್ಯಾದ ತಮ್ಮ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.

ಈ ಸಭೆಯಲ್ಲಿ ಭಾಗವಹಿಸಲು ಮತ್ತು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತಾ ವಿಷಯಗಳ ಕುರಿತು ವೇದಿಕೆಯನ್ನುದ್ದೇಶಿಸಿ ಮಾತನಾಡಲು ರಾಜನಾಥ್ ಸಿಂಗ್ ಮೂರು ದಿನಗಳ ಲಾವೋಸ್ ಭೇಟಿ ಕೈಗೊಂಡಿದ್ದಾರೆ.

ಚೀನಾದ ರಕ್ಷಣಾ ಸಚಿವ ಅಡ್ಮಿರಲ್ ಡಾಂಗ್ ಜುನ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳಿಸುವ ಮೂಲಕ ಉಭಯ ದೇಶಗಳ ನಡುವೆ ಹೆಚ್ಚಿನ ನಂಬಿಕೆ ಮತ್ತು ವಿಶ್ವಾಸವನ್ನು ಹೆಚ್ಚಿಸುವ ಬಗ್ಗೆ ಒತ್ತಿ ಹೇಳಿದರು. ೨೦೨೦ರ ದುರದೃಷ್ಟಕರ ಗಡಿ ಘರ್ಷಣೆಯಿಂದ ಕಲಿತ ಪಾಠಗಳನ್ನು ನೆನಪಿಸಿದ ಅವರು, ಅಂತಹ ಘಟನೆಗಳು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಭಾರತ-ಚೀನಾ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಬೇಕು ಎಂದರು.

ಮಲೇಷಿಯಾದ ರಕ್ಷಣಾ ಸಚಿವ ಡಾಟೊ ಸೆರಿ ಮೊಹಮದ್ ಖಲೀದ್ ಬಿನ್ ನಾರ್ಡಿನ್ ಅವರೊಂದಿಗಿನ ಸಭೆಯಲ್ಲಿ, ಎರಡೂ ದೇಶಗಳು ಈ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆ ಉತ್ತೇಜಿಸಲು ಅರ್ಥಪೂರ್ಣ ಫಲಿತಾಂಶಗಳನ್ನು ಪಡೆಯಲು ಪರಸ್ಪರರ ಪ್ರಯತ್ನಗಳನ್ನು ಬೆಂಬಲಿಸಲು ಒಪ್ಪಿಕೊಂಡರು.

೨೦೨೫ರ ಮೊದಲ ತ್ರೈಮಾಸಿಕದಲ್ಲಿ ಮಲೇಷ್ಯಾ-ಭಾರತದ ರಕ್ಷಣಾ ಸಮಿತಿ ಸಭೆಯನ್ನು ಇಬ್ಬರೂ ನಾಯಕರು ಎದುರು ನೋಡುತ್ತಿದ್ದಾರೆ, ಅದರಲ್ಲಿ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಎರಡೂ ಕಡೆಯವರು ವಿವರವಾದ ಚರ್ಚೆಗಳನ್ನು ನಡೆಸುವರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande