ಪ್ರಧಾನಿ ಮೋದಿಗೆ ಗಯಾನಾದಲ್ಲಿ ಭಾರತೀಯ ವಲಸಿಗರಿಂದ ಅದ್ದೂರಿ ಸ್ವಾಗತ
ಜಾರ್ಜ್‌ಟೌನ್, 20 ನವೆಂಬರ್(ಹಿ.ಸ.) : ಆ್ಯಂಕರ್ : ಗಯಾನಾಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಭಾರತೀಯ ಸಮುದಾಯದವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಡಯಾಸ್ಪೊರಾ ಸದಸ್ಯರನ್ನು ಶ್ಲಾಘಿಸಿದ್ದಾರೆ. ಅವರಲ್ಲಿ ಹಲವರು 180 ವರ್ಷಗಳ ಹಿಂದೆಯೇ ಭಾರ
PM Narendra Modi gets grand welcome from Indian communit


ಜಾರ್ಜ್‌ಟೌನ್, 20 ನವೆಂಬರ್(ಹಿ.ಸ.) :

ಆ್ಯಂಕರ್ : ಗಯಾನಾಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಭಾರತೀಯ ಸಮುದಾಯದವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಡಯಾಸ್ಪೊರಾ ಸದಸ್ಯರನ್ನು ಶ್ಲಾಘಿಸಿದ್ದಾರೆ. ಅವರಲ್ಲಿ ಹಲವರು 180 ವರ್ಷಗಳ ಹಿಂದೆಯೇ ಭಾರತ ಬಿಟ್ಟು ವಲಸೆ ಬಂದವರು.

ಗಯಾನಾದಲ್ಲಿ ಭಾರತೀಯ ಸಮುದಾಯದವರು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿಯವರ ಈ ಭೇಟಿ 56 ವರ್ಷಗಳ ನಂತರ ಗಯಾನಾಗೆ ಭಾರತದ ಮುಖ್ಯಸ್ಥರ ಮೊದಲ ಭೇಟಿಯಾಗಿದೆ. ಅವರು ಮಂಗಳವಾರ ರಾತ್ರಿ ಬ್ರೆಜಿಲ್‌ನಿಂದ ನಿರ್ಗಮಿಸಿದ ನಂತರ ಇಂದು ಬೆಳ್ಳಂಬೆಳಗ್ಗೆ ಗಯಾನಾಗೆ ಆಗಮಿಸಿದರು.

ಬಳಿಕ ಹೋಟೆಲ್‌ನಲ್ಲಿ ಭಾರತೀಯ ಡಯಾಸ್ಪೊರಾ ಸದಸ್ಯರೊಂದಿಗೆ ಸಂವಾದ ನಡೆಸಿದರು.

“ಹೋಟೆಲ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಗಯಾನಾದ ಅಧ್ಯಕ್ಷ, ಗ್ರೆನಡಾದ ಪ್ರಧಾನಿ, ಬಾರ್ಬಡೋಸ್‌ನ ಪ್ರಧಾನಿ ಮತ್ತು ಗಯಾನಾದ ಹಲವಾರು ಕ್ಯಾಬಿನೆಟ್ ಮಂತ್ರಿಗಳು ವಿಶೇಷ ಸ್ವಾಗತವನ್ನು ನೀಡಿದರು” ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಎಕ್ಸ್​ ಪೋಸ್ಟ್‌ನಲ್ಲಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande