ಪಣಜಿ, 20 ನವೆಂಬರ್(ಹಿ.ಸ.) :
ಆ್ಯಂಕರ್ : ಇಂದಿನಿಂದ ಇದೇ ೨೮ರವರೆಗೆ ಗೋವಾದಲ್ಲಿ ೫೫ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಈ ವರ್ಷದ ಚಿತ್ರೋತ್ಸವದಲ್ಲಿ ಆಸ್ಟ್ರೇಲಿಯಾವನ್ನು ’ಕಂಟ್ರಿ ಆಫ್ ಫೋಕಸ್’ ಎಂದು ಗುರುತಿಸಲಾಗಿದ್ದು, ಆ ದೇಶದ ಚಲನಚಿತ್ರಗಳನ್ನು ವಿಶೇಷವಾಗಿ ಪ್ರದರ್ಶಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಭಾರತೀಯ ಚಲನಚಿತ್ರದ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ನೀಡುತ್ತಿರುವುದು ಗಮನಾರ್ಹ. ಐಎಫ್‌ಎಫ್‌ಐನ ಇಂಡಿಯನ್ ಪನೋರಮಾ ವಿಭಾಗದಲ್ಲಿ ೨೫ ಚಲನಚಿತ್ರಗಳು ಮತ್ತು ೨೦ ನಾನ್-ಫೀಚರ್ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು ನಿನ್ನೆ ಸಂಜೆ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಿದ್ಧತೆಗಳ ಮೇಲ್ವಿಚಾರಣೆ ನಡೆಸಿದರು. ಸುದ್ದಿಗಾರರಯೊಂದಿಗೆ ಮಾತನಾಡಿದ ಸಾವಂತ್, ಉದ್ಘಾಟನಾ ಸಮಾರಂಭಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಸಂಜಯ್ ಜಾಜು, ಸುದ್ದಿಗಾರರಯೊಂದಿಗೆ ಮಾತನಾಡಿ, ಈ ವರ್ಷದ ಐಎಫ್‌ಎಫ್‌ಐಗೆ ಹಲವು ಹೊಸ ವಿಷಯಗಳನ್ನು ಸೇರಿಸಲಾಗಿದೆ. ಚಿತ್ರೋತ್ಸವವನ್ನು ಯುವ ಚಲನಚಿತ್ರ ನಿರ್ಮಾಪಕರಿಗೆ ಸಮರ್ಪಿಸಲಾಗಿದೆ. ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ವೇದಿಕೆಯಲ್ಲಿ ೧೦೦ ಯುವ ಪ್ರತಿಭೆಗಳು ಸೃಜನಶೀಲತೆಯನ್ನು ಪ್ರದರ್ಶಿಸಲಿದ್ದಾರೆ ಈ ವರ್ಷ ೧೦೦ ದೇಶಗಳ ೪೦೦ ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಜಾಜು ವಿವರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್