ಮುಂಬೈ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ಕಂಗುವ ಚಿತ್ರವು ಬಿಡುಗಡೆಯಾದ ನಂತರ ನಿರೀಕ್ಷೆಗಳನ್ನು ಪೂರ್ಣಗೊಳಿಸಲು ವಿಫಲವಾಗಿದೆ. ಮೊದಲ ದಿನ 24 ಕೋಟಿ ರೂಪಾಯಿಗಳನ್ನು ಗಳಿಸಿದ್ದ ಚಿತ್ರ, ಎರಡನೇ ದಿನ ಕೆಲವೇ 9 ಕೋಟಿ ರೂಪಾಯಿ ಗಳಿಸಿದೆ. ಕಡಿಮೆ ರೇಟಿಂಗ್ ಮತ್ತು ಟೀಕೆಗಳಿಂದಾಗಿ ಚಿತ್ರದ ಗಳಿಕೆ ಕುಸಿದಿದೆ.
‘ಕಂಗುವ’ ಚಲನಚಿತ್ರ ನವೆಂಬರ್ 14ರಂದು ಬಿಡುಗಡೆ ಆಯಿತು. ಎರಡು ಕಾಲ ಘಟ್ಟದಲ್ಲಿ ಚಲನಚಿತ್ರದ ಕಥೆ ಸಾಗಲಿದೆ. ಈ ಚಿತ್ರವನ್ನು ನೋಡಿದ ಕೆಲವರು ಬೇಸರ ವ್ಯಕ್ತಪಡೆಸುತ್ತಿದ್ದಾರೆ. ಈ ಚಿತ್ರಕ್ಕೆ ರೇಟಿಂಗ್ ಕೂಡ ಕಡಿಮೆ ಸಿಕ್ಕಿದೆ. ಈಗ ಚಿತ್ರದ ಗಳಿಕೆ ದಿನ ಕಳೆದಂತೆ ಮತ್ತಷ್ಟು ತಗ್ಗಿದೆ. ಮೊದಲ ದಿನ ಎರಂಡಕಿ ಇದ್ದ ಗಳಿಕೆ ಈಗ ಒಂದಂಕಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಹೀಗೆ ಮುಂದುವರಿದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಆಘಾತ ಕಂಡಿದೆ.
‘ಕಂಗುವ’ ಚಲನಚಿತ್ರ ಮೊದಲ ದಿನದ ಗಳಿಕೆ 24 ಕೋಟಿ ರೂಪಾಯಿ ಆಗಿತ್ತು. ಎರಡನೇ ದಿನ ಈ ಚಿತ್ರ ಗಳಿಕೆ ಮಾಡಿದ್ದು ಕೇವಲ 9 ಕೋಟಿ ರೂಪಾಯಿ! ಆರಂಭಿಕ ಲೆಕ್ಕಾಚಾರಗಳ ಪ್ರಕಾರ ಈ ಚಲನಚಿತ್ರ ಎರಡನೇ ದಿನ ಗಳಿಕೆ ಮಾಡಿದ್ದು ಕೆಲವೇ ಕೋಟಿಗಳು. ಇದು ತಂಡಕ್ಕೆ ಆಘಾತ ಆಗಿದೆ. ನಿರ್ಮಾಪಕರು ಈ ಚಲನಚಿತ್ರದಿಂದ ದೊಡ್ಡ ನಷ್ಟ ಅನುಭವಿಸಿದ್ದಾರೆ.
ಸದ್ಯ ಚಿತ್ರದ ಒಟ್ಟಾರೆ ಗಳಿಕೆ 30 ಕೋಟಿ ರೂಪಾಯಿ. ಈ ಚಿತ್ರದ ನಿರ್ಮಾಣ ವೆಚ್ಚವು 350 ಕೋಟಿ ರೂಪಾಯಿ. ಅಂದರೆ, ಚಲನಚಿತ್ರ ಒಟ್ಟೂ ನಿರ್ಮಾಣ ವೆಚ್ಚದ ಶೇ.10ರಷ್ಟು ಗಳಿಕೆ ಮಾಡಲು ಚಲನಚಿತ್ರ ವಿಫಲವಾಗಿದೆ. ಹೀಗೆ ಮುಂದುವರಿದರೆ ಚಲನಚಿತ್ರ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್