ಧಾರವಾಡ, 20 ನವೆಂಬರ್ (ಹಿ.ಸ.) :
ಆ್ಯಂಕರ್ : ಹೆತ್ತವರಿಂದಲೇ ಅಪಹರಣಕ್ಕೊಳಗಾಗಿದ್ದ ಆರು ಮಕ್ಕಳನ್ನು ರಕ್ಷಿಸುವಲ್ಲಿ ಧಾರವಾಡ ವಿದ್ಯಾಗಿರಿ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ.
ಇದೇ ತಿಂಗಳು ದಿನಾಂಕ ೫ರಂದು ನಗರದ ಆರು ಮಕ್ಕಳ ಅಪಹರಣ ಕುರಿತು ದೀಪಕ ಸಾಂಬ್ರಾಣಿ ಎಂಬುವವರು ವಿದ್ಯಾಗಿರಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಕುರಿತು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿದ್ಯಾಗಿರಿ ಠಾಣೆ ಪೋಲಿಸ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗನಾಳ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಅಪಹರಣಕ್ಕೊಳಗಾಗಿದ್ದ ಮಕ್ಕಳನ್ನು ಬೆಂಗಳೂರಿನಲ್ಲಿ ರಕ್ಷಿಸಿದ್ದಾರೆ. ಅಪಹರಣ ಪ್ರಕರಣದಲ್ಲಿ ಹೆತ್ತ ತಾಯದಿಂರೆ ಶಾಮೀಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದ ರೇಶ್ಚಾ ಸಾಂಬ್ರಾಣಿ, ಪ್ರಿಯಾಂಕ ಸಾಂಬ್ರಾಣಿ, ಭೂಸಪ್ಪ ಚೌಕ್ನ ಸುನೀಲ ಕರಿಗಾರ ಮತ್ತು ಶಿಕಾರಿಪುರದ ಮುತ್ತುರಾಜ ಬಿ. ಎಂಬವರನ್ನು ಬಂಧಿಸಲಾಗಿದೆ. ಅಪಹರಣದ ಉದ್ದೇಶ ಹಾಗೂ ಇತರರು ಭಾಗಿಯಾಗಿರುವ ಕುರಿತು ತನಿಖೆ ಮುಂದುವರೆದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa