ಲಿಂಗಸೂಗೂರು, 20 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆಯ ಬೀದರ್ - ಬಳ್ಳಾರಿ ಮಾರ್ಗದ ಮಧ್ಯೆ 20 ಕ್ಕೂ ದರೋಡೆಕೋರರ ಗುಂಪು ಮಂಗಳವಾರ ರಾತ್ರಿ ಅಥವಾ ಬುಧವಾರ ನಸುಕಿನಲ್ಲಿ 20 ಸಾರಿಗೆ ಬಸ್, 20 ಖಾಸಗಿ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿ, ದರೋಡೆಗೆ ವಿಫಲಯತ್ನ ನಡೆಸಿದ್ದಾರೆ.
ಮಂಗಳವಾರ ರಾತ್ರಿ ವೇಳೆ ಟೆಂಪೆÇೀ, ಲಾರಿ, ಕಾರು ಸೇರಿದಂತೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಎಲ್ಲಾ ವಾಹನಗಳ ಮೇಲೆ ದರೋಡೆಕೋರರ ತಂಡವು ಕಲ್ಲು ತೂರಿದೆ. ಆದರೆ, ವಾಹನಗಳ ಚಾಲಕರ ಜಾಣತನ ಮತ್ತು ಸಕಾಲಿಕ ನಿರ್ಧಾರಗಳಿಂದಾಗಿ ವಾಹನಗಳ ನಿಲುಗಡೆ ಮಾಡದ ಕಾರಣ ದರೋಡೆ ಯತ್ನ ವಿಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಹಟ್ಟಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್