ಬಾಳೆಹಣ್ಣಿನಿಂದ ದೇಹಕ್ಕಿದೆ ಸಾಕಷ್ಟು ಪ್ರಯೋಜನ
ನವದೆಹಲಿ, 20 ನವೆಂಬರ್(ಹಿ.ಸ.) : ಬಾಳೆಹಣ್ಣಿನಿಂದಾಗುವ ಪ್ರಯೋಜನಗಳು ತೂಕ ಇಳಿಕೆ: ನಿತ್ಯ ಬಾಳೆಹಣ್ಣು ಸೇವನೆ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು. ಬಾಳೆಹಣ್ಣಿನಲ್ಲಿ ಪ್ರೋಟಿನ್ ಹಾಗೂ ಫೈಬರ್ ಇರುತ್ತದೆ. ನಿಶ್ಯಕ್ತಿಯನ್ನು ಹೋಗಲಾಡಿಸುತ್ತದೆ: ನಿಶ್ಯಕ್ತಿಯನ್ನು ಹೋಗಲಾಡಿಸುವ ಶಕ್ತಿ ಬಾಳೆಹಣ್ಣಿಗಿದೆ. ಬ
ನನನ


ನವದೆಹಲಿ, 20 ನವೆಂಬರ್(ಹಿ.ಸ.) :

ಬಾಳೆಹಣ್ಣಿನಿಂದಾಗುವ ಪ್ರಯೋಜನಗಳು ತೂಕ ಇಳಿಕೆ: ನಿತ್ಯ ಬಾಳೆಹಣ್ಣು ಸೇವನೆ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು. ಬಾಳೆಹಣ್ಣಿನಲ್ಲಿ ಪ್ರೋಟಿನ್ ಹಾಗೂ ಫೈಬರ್ ಇರುತ್ತದೆ.

ನಿಶ್ಯಕ್ತಿಯನ್ನು ಹೋಗಲಾಡಿಸುತ್ತದೆ: ನಿಶ್ಯಕ್ತಿಯನ್ನು ಹೋಗಲಾಡಿಸುವ ಶಕ್ತಿ ಬಾಳೆಹಣ್ಣಿಗಿದೆ. ಬೇರೆಲ್ಲಾ ಎನರ್ಜಿ ಡ್ರಿಂಕ್​ಗಳಿಗಿಂತ ಬಾಳೆಹಣ್ಣಿನಲ್ಲಿ ಹೆಚ್ಚು ಶಕ್ತಿ ಇದೆ.ಆ್ಯಂಕರ್ :ವರ್ಷದ 365 ದಿನಗಳು ನೋಡಲು ಸಿಗುವ ಹಣ್ಣು ಎಂದರೆ ಅದು ಬಾಳೆಹಣ್ಣು. ಯಾವುದೋ ಒಂದು ತಿಂಗಳು ಮಾತ್ರ ಇದರ ಬೆಲೆ ಗಗನಕ್ಕೆ ಹೋಗುತ್ತದೆ. ಅಷ್ಟು ಬಿಟ್ಟರೆ ಉಳಿದ ಎಲ್ಲಾ ಸಮಯದಲ್ಲೂ ಬಾಳೆಹಣ್ಣು ಎಲ್ಲರಿಗೂ ಇಷ್ಟವಾದ ಬೆಲೆಯಲ್ಲಿ ಸಿಗುತ್ತದೆ.

ಬಾಳೆಹಣ್ಣು ಒಂದು ನೈಸರ್ಗಿಕ ಹಣ್ಣಾಗಿದೆ. ವಿಟಮಿನ್ ಸಿ ಸಹಿತ ಇದರಲ್ಲಿ ಖನಿಜಾಂಶಗಳು ಮತ್ತು ಪೌಷ್ಟಿಕ ಸತ್ವಗಳು ಸಾಕಷ್ಟು ಸಿಗುತ್ತವೆ. ಹಾಗಾಗಿ ನಮ್ಮ ಜೀರ್ಣಾಂಗ ವ್ಯವಸ್ಥೆಯ ಅಭಿವೃದ್ಧಿಯಿಂದ ಹಿಡಿದು ನಮ್ಮ ಸೌಂದರ್ಯದವರೆಗೂ ಬಾಳೆಹಣ್ಣಿನ ಪಾತ್ರ ಇರುತ್ತದೆ. ಎಷ್ಟೇ ಸುಸ್ತಾಗಿದ್ದರೂ ನಮ್ಮ ದೇಹಕ್ಕೆ ತಕ್ಷಣವೇ ಶಕ್ತಿ ಮತ್ತು ಚೈತನ್ಯ ಕೊಡುವಂತಹ ಸಾಮರ್ಥ್ಯ ಬಾಳೆಹಣ್ಣಿಗೆ ಇದೆ. ಇದರಲ್ಲಿ ನಾರಿನ ಅಂಶ ಅಧಿಕವಾಗಿದ್ದು ನಾವು ತಿನ್ನುವ ಆಹಾರ ನಮಗೆ ಮಲ ಬದ್ಧತೆ ಉಂಟು ಮಾಡದಂತೆ ಇದು ನೋಡಿಕೊಳ್ಳುತ್ತದೆ. ಇನ್ನು ಹಲವಾರು ಉಪಯೋ ಗಗಳು ಬಾಳೆಹಣ್ಣಿನಿಂದ ಸಿಗುತ್ತವೆ.

ಬಾಳೆಹಣ್ಣಿನಲ್ಲಿ ಅಪಾರವಾದ ಪೌಷ್ಟಿಕಾಂಶಗಳು ಇರಲಿದ್ದು, ಪೊಟ್ಯಾಶಿ ಯಮ್, ವಿಟಮಿನ್ ಸಿ ಜೊತೆಗೆ ವಿಟಮಿನ್ ಬಿ6, ನಾರಿನ ಪ್ರಮಾಣ ಮತ್ತು ಇನ್ನಿತರ ಅಂಶಗಳು ಸಾಕಷ್ಟು ಸಿಗುತ್ತವೆ. ಎಲ್ಲವೂ ಸಹ ನಮ್ಮ ದೇಹಕ್ಕೆ ಸಮರ್ಪಕವಾಗಿ ಬೇಕಾದ ಪೌಷ್ಟಿಕ ಸತ್ವಗಳೇ ಆಗಿವೆ.

ಬಾಳೆಹಣ್ಣಿನಿಂದಾಗುವ ಪ್ರಯೋಜನಗಳು ತೂಕ ಇಳಿಕೆ: ನಿತ್ಯ ಬಾಳೆಹಣ್ಣು ಸೇವನೆ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು. ಬಾಳೆಹಣ್ಣಿನಲ್ಲಿ ಪ್ರೋಟಿನ್ ಹಾಗೂ ಫೈಬರ್ ಇರುತ್ತದೆ.

ನಿಶ್ಯಕ್ತಿಯನ್ನು ಹೋಗಲಾಡಿಸುತ್ತದೆ: ನಿಶ್ಯಕ್ತಿಯನ್ನು ಹೋಗಲಾಡಿಸುವ ಶಕ್ತಿ ಬಾಳೆಹಣ್ಣಿಗಿದೆ. ಬೇರೆಲ್ಲಾ ಎನರ್ಜಿ ಡ್ರಿಂಕ್​ಗಳಿಗಿಂತ ಬಾಳೆಹಣ್ಣಿನಲ್ಲಿ ಹೆಚ್ಚು ಶಕ್ತಿ ಇದೆ.

ಮುಖದ ಕಾಂತಿ ಕಾಪಾಡುತ್ತದೆ: ಬಾಳೆಹಣ್ಣು ತ್ವಚೆಯ ಕಾಂತಿಯನ್ನು ಕಾಪಾಡುವುದಷ್ಟೇ ಅಲ್ಲದೆ ಚರ್ಮವು ಬೇಗ ಸುಕ್ಕುಗಟ್ಟದಂತೆ ತಡೆಯುತ್ತದೆ.

ಹೃದಯದ ಆರೋಗ್ಯ ಕಾಪಾಡುತ್ತದೆ: ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಅಂಶವು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ. ಅದನ್ನು ಸೇವಿಸುವುದರಿಂದ ಶೇ.27ರಷ್ಟು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande