ಔಷಧೀಯ ಗುಣಗಳ ಕಣಜ…ಜೇನು ತುಪ್ಪ 
ನವದೆಹಲಿ, 19 ನವೆಂಬರ್ (ಹಿ.ಸ.) : ಆ್ಯಂಕರ್ : ಮನುಷ್ಯನ ಆರೋಗ್ಯದ ವಿಷಯಕ್ಕೆ ಬಂದಾಗ ಜೇನುತುಪ್ಪವನ್ನು ಎಷ್ಟು ಹೊಗಳಿದರೂ ಕೂಡ ಕಡಿಮೆಯೇ! ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ಔಷಧೀಯ ಗುಣಗಳನ್ನು ಒಳಗೊಂಡಿರುವ ಇದು, ಸಣ್ಣ-ಪಟ್ಟ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ವಿಶೇಷವ
ಔಷಧೀಯ ಗುಣಗಳ ಕಣಜ…ಜೇನು ತುಪ್ಪ


ನವದೆಹಲಿ, 19 ನವೆಂಬರ್ (ಹಿ.ಸ.) :

ಆ್ಯಂಕರ್ : ಮನುಷ್ಯನ ಆರೋಗ್ಯದ ವಿಷಯಕ್ಕೆ ಬಂದಾಗ ಜೇನುತುಪ್ಪವನ್ನು ಎಷ್ಟು ಹೊಗಳಿದರೂ ಕೂಡ ಕಡಿಮೆಯೇ! ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ಔಷಧೀಯ ಗುಣಗಳನ್ನು ಒಳಗೊಂಡಿರುವ ಇದು, ಸಣ್ಣ-ಪಟ್ಟ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ.

ವಿಶೇಷವಾಗಿ ಚಳಿಗಾಲದಲ್ಲಿ ಜೇನುತುಪ್ಪ ಸೇವನೆ ಒಳ್ಳೆಯದು ಎನ್ನುತ್ತಾರೆ ಆಯುಷ್ ತಜ್ಞರು. ಚಳಿಗಾಲದಲ್ಲಿ ಪ್ರತಿದಿನ ಒಂದು ಚಮಚ ಜೇನುತುಪ್ಪ ಸೇವಿಸಿದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಅನ್ನೋ ವಿವರ ಹೀಗಿದೆ.

ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮು ಸಾಮಾನ್ಯ ಸಮಸ್ಯೆಯಾಗಿದೆ. ಪ್ರತಿದಿನ ಜೇನುತುಪ್ಪ ಸೇವನೆ ಮಾಡುವುದರಿಂದ ಈ ಸಮಸ್ಯೆಗೆ ಮುಕ್ತಿ ಪಡೆಯಬಹುದು. ಜೇನು ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಸಣ್ಣಪುಟ್ಟ ಕಾಯಿಲೆಗಳಿಗೆ ಪರಿಹಾರ ಸಿಗುತ್ತದೆ. ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಜೇನುತುಪ್ಪ ಪ್ರಮುಖ ಪಾತ್ರ ವಹಿಸುತ್ತದೆ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಹೃದಯಾಘಾತದಂತಹ ಅಪಾಯಗಳನ್ನು ತಪ್ಪಿಸುತ್ತದೆ.

ಆಯುರ್ವೇದದಲ್ಲಿ ಜೇನುತುಪ್ಪಕ್ಕೆ ಅಗ್ರಸ್ಥಾನವಿದೆ. ಆದರೆ ಬೆಂಗಳೂರಿನ ಖ್ಯಾತ ಆಯುರ್ವೇದ ತಜ್ಞ ಡಾ. ಮಾನಸ ಶ್ರು ಅವರು ಹೇಳುವ ಪ್ರಕಾರ, ಜೇನುತುಪ್ಪ ವನ್ನು ಯಾವುದೇ ಕಾರಣಕ್ಕೂ ಕೂಡ ಬಿಸಿ ಪದಾರ್ಥಗ ಳೊಂದಿಗೆ, ಅಂದರೆ ಬಿಸಿ ನೀರಿಗೆ ಬೆರೆಸಿ ಸೇವಿಸಬಾರದು ಎಂದು ಸಲಹೆ ಗಳನ್ನು ನೀಡುತ್ತಾರೆ.

ಯಾಕೆಂದರೆ ಇದರಿಂದ ಜೇನಿನಲ್ಲಿ ಕಂಡು ಬರುವ ಸತ್ವವೆಲ್ಲ ಕಳೆದು ಆರೋಗ್ಯದ ಮೇಲೆ ಅಡ್ಡಪರಿಣಾಮ ಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಲಹೆಗಳನ್ನು ನೀಡುತ್ತಾರೆ.

ಜೇನುತುಪ್ಪ ಆರೋಗ್ಯಕ್ಕೆ ಒಳ್ಳೆಯದು ಎಂದು, ಜಾಸ್ತಿ ಸೇವನೆ ಮಾಡುವುದು ಸರಿಯಲ್ಲ. ಇದರ ಬದಲಿಗೆ, ಪ್ರತಿದಿನ ಕೇವಲ ಒಂದರಿಂದ ಎರಡು ಚಮಚದಷ್ಟು ಜೇನುತುಪ್ಪವನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು

ಬಾಯಿಹುಣ್ಣು ಆದ ಸಂದರ್ಭದಲ್ಲಿ, ಪ್ರತಿದಿನ ಒಂದೆರಡು ಟೇಬಲ್ ಚಮಚ ಆಗುವಷ್ಟು ಜೇನು ತುಪ್ಪವನ್ನು ಬಾಯಿಯಲ್ಲಿ ಹಾಕಿ ಇಟ್ಟುಕೊಂಡರೆ ಬಾಯಿಹುಣ್ಣು ಸಮಸ್ಯೆ ಬಹಳ ಬೇಗನೇ ನಿವಾರಣೆ ಯಾಗುತ್ತದೆ.

ಇಲ್ಲಾಂದ್ರೆ, ಒಂದು ಟೀ ಚಮಚದಷ್ಟು ನೆಲ್ಲಿಕಾಯಿಯ ಪುಡಿಗೆ, ಇಷ್ಟೇ ಪ್ರಮಾಣದಲ್ಲಿ ಜೇನು ತುಪ್ಪ ದೊಂದಿಗೆ ಸೇರಿಸಿ, ದಪ್ಪಗೆ ಪೇಸ್ಟ್ ರೀತಿ ಮಾಡಿಕೊಂಡು, ಹುಣ್ಣು ಇರುವ ಜಾಗಕ್ಕೆ ಹಚ್ಚಿದರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ.

ಜೇನುತುಪ್ಪದಲ್ಲಿ ಮೆಗ್ನೀಸಿಯಮ್, ಐರನ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಸಮೃದ್ಧವಾಗಿರುತ್ತದೆ. ಇವು ದೇಹಕ್ಕೆ ತುಂಬಾ ಉಪಯುಕ್ತವಾಗಿವೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಐರನ್ ಕಂಟೆಂಟ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಬೆಚ್ಚಗಿನ ನೀರಿಗೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಉಸಿರಾಟ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande