ಕ್ರೆಡಿಟ್ ಕಾರ್ಡ್ ಸರಿಯಾದ ಮತ್ತು ಸಮರ್ಪಕ ಬಳಕೆ ಹೇಗೆ?
ನವದೆಹಲಿ, 19ನವೆಂಬರ್ (ಹಿ.ಸ.) : ಆ್ಯಂಕರ್ : ಆಧುನಿಕ ಜಗತ್ತಿನಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಸಾಮಾನ್ಯ ಎಂಬ ಸ್ಥಿತಿಗೆ ಬಂದು ತಲುಪಿದ್ದೇವೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತ ನಮ್ಮ ಖರ್ಚು ವೆಚ್ಚಗಳು ಅಧಿಕವಾಗುತ್ತಲೇ ಹೋಗುತ್ತವೆ. ಕ್ರೆಡಿಟ್ ಕಾರ್ಡ್ ಎಷ್ಟು ಲಾಭದಾಯಕವೋ ಅಷ್ಟೇ ಅಪಾಯಗಳನ್ನು ಹೊಂದಿ
್್


ನವದೆಹಲಿ, 19ನವೆಂಬರ್ (ಹಿ.ಸ.) :

ಆ್ಯಂಕರ್ : ಆಧುನಿಕ ಜಗತ್ತಿನಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಸಾಮಾನ್ಯ ಎಂಬ ಸ್ಥಿತಿಗೆ ಬಂದು ತಲುಪಿದ್ದೇವೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತ ನಮ್ಮ ಖರ್ಚು ವೆಚ್ಚಗಳು ಅಧಿಕವಾಗುತ್ತಲೇ ಹೋಗುತ್ತವೆ. ಕ್ರೆಡಿಟ್ ಕಾರ್ಡ್ ಎಷ್ಟು ಲಾಭದಾಯಕವೋ ಅಷ್ಟೇ ಅಪಾಯಗಳನ್ನು ಹೊಂದಿದೆ. ಕ್ರೆಡಿಟ್ ಕಾರ್ಡ್‌ ಮೂಲಕ ಕೆಲ ವಹಿವಾಟುಗಳನ್ನು ಯಾವತ್ತೂ ಮಾಡದಿರಿ. ಒಂದು ವೇಳೆ ಮಾಡಿದ್ದೇ ಆದಲ್ಲಿ ನಿಮಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್​ ಬರುವುದು ಗ್ಯಾರಂಟಿ.

ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳು

ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ನೀವು ಉನ್ನತ-ಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸಬಹುದು ಮತ್ತು ನಂತರ ಸುಲಭವಾಗಿ ಮರುಪಾವತಿ ಮಾಡಬಹುದು. ಕೆಲವು ಕ್ರೆಡಿಟ್ ಕಾರ್ಡ್‌ಗಳು ದೊಡ್ಡ-ಟಿಕೆಟ್ ಖರೀದಿಗಳನ್ನು ಸುಲಭವಾದ, ನಿರ್ವಹಿಸಬಹುದಾದ ಇ ಎಂ ಐ ಗಳಾಗಿ ಪರಿವರ್ತಿಸಲು ಸಹ ನಿಮಗೆ ಅನುಮತಿಸುತ್ತದೆ.

ಕ್ರೆಡಿಟ್ ಕಾರ್ಡ್ ತಾತ್ಕಾಲಿಕ ಅವಧಿಗೆ ಬಡ್ಡಿರಹಿತ ಸಾಲ ಕೊಡುತ್ತದೆ. ನೀವು ಸರಿಯಾಗಿ ನಿಭಾಯಿಸಿದರೆ ಬಹಳ ಅನುಕೂಲ ತರುತ್ತದೆ. ಒಂದು ವೇಳೆ ಸರಿಯಾದ ಅವಧಿಗೆ ಬಿಲ್ ಕಟ್ಟದಿದ್ದರೆ ದಂಡ, ಅಧಿಕ ಬಡ್ಡಿ ಇತ್ಯಾದಿ ಹೇರಲಾಗುತ್ತದೆ. ಜನರ ಈ ದೌರ್ಬಲ್ಯವೇ ಕ್ರೆಡಿಟ್ ಕಾರ್ಡ್ ಕಂಪನಿಗಳಿಗೆ ಲಾಭದ ಹಾದಿ.

ಆದಾಯ ತೆರಿಗೆ ಇಲಾಖೆಯು ನಮ್ಮ ಕ್ರೆಡಿಟ್ ಕಾರ್ಡ್ ವಹಿವಾಟುಗಳಿಂದ ಹಿಡಿದು, ನಮ್ಮ ವ್ಯಾಪಾರ ವಹಿವಾಟು ಮತ್ತು ನಗದು ಠೇವಣಿ ಸೇರಿ ಹಲವು ಮಾಹಿತಿ ಸಂಗ್ರಹಣ ಮಾಡುವುದರ ಜೊತೆಗೆ ಹದ್ದಿನ ಕಣ್ಣು ಇಟ್ಟಿರುತ್ತದೆ. ಆದಾಯಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟುಗಳು ಕಂಡು ಬಂದರೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್​ ಬರುವುದು ಗ್ಯಾರಂಟಿ! ಆದ್ದರಿಂದ ಕ್ರೆಡಿಟ್ ಕಾರ್ಡ್ ವಹಿವಾಟುಗಳಲ್ಲಿ ಬಹಳ ಜಾಗರೂಕರಾಗಿರಿ. ಇಲ್ಲದಿದ್ದರೆ ಆದಾಯ ತೆರಿಗೆ ಇಲಾಖೆ ನಿಮಗೆ ಐಟಿ ನೋಟಿಸ್ ಕಳುಹಿಸಬಹುದು.

ವಿದೇಶಿ ಪ್ರಯಾಣ ವೆಚ್ಚಗಳು: ಕೆಲವರು ವಿದೇಶ ಪ್ರವಾಸಕ್ಕಾಗಿ ದುಂದುವೆಚ್ಚ ಮಾಡುತ್ತಾರೆ. ಆದರೆ, ಇದನ್ನು ಸಾಧ್ಯವಾದಷ್ಟು ಮಾಡದಿರುವುದೇ ಉತ್ತಮ. ಏಕೆಂದರೆ ಒಂದು ವರ್ಷದಲ್ಲಿ ವಿದೇಶ ಪ್ರಯಾಣಕ್ಕೆ 2 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿದರೆ ಅದು ತಾನಾಗಿಯೇ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬರುತ್ತದೆ. ಇದರಿಂದ ನಿಮಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರಬಹುದು.

ಅಧಿಕ ಹಣ ಖರ್ಚು: ಕೆಲವರು ಕ್ರೆಡಿಟ್ ಕಾರ್ಡ್ ಬಳಸಿ ಆದಾಯಕ್ಕೂ ಮೀರಿ ಅಧಿಕ ಹಣವನ್ನು ಖರ್ಚು ಮಾಡುತ್ತಾರೆ. ಅಂತಹ ಕ್ರೆಡಿಟ್ ಕಾರ್ಡ್ ವೆಚ್ಚಗಳು ವಾರ್ಷಿಕವಾಗಿ 2 ಲಕ್ಷ ರೂ. ಮೀರಿದರೆ, ಆದಾಯ ತೆರಿಗೆ ಇಲಾಖೆಯು ನಿಮ್ಮ ಬಗ್ಗೆ ವಿಶೇಷ ಗಮನ ಹರಿಸುತ್ತದೆ. ನಿಮ್ಮ ಹಣಕಾಸಿನ ವಹಿವಾಟುಗಳನ್ನು ಪ್ರತ್ಯೇಕವಾಗಿ ಟ್ರ್ಯಾಕ್ ಮಾಡುತ್ತದೆ. ಈ ಮಾರ್ಗದಿಂದಲೂ ನಿಮಗೆ ನೋಟಿಸ್​ ಬರಬಹುದು.

ಷೇರು, ಮ್ಯೂಚುವಲ್ ಫಂಡ್ ಹೂಡಿಕೆಗಳು: ಒಂದು ವರ್ಷದಲ್ಲಿ ನೀವು 10 ಲಕ್ಷ ರೂ.ಗಿಂತ ಹೆಚ್ಚು ಷೇರುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದರೆ, ಆದಾಯ ತೆರಿಗೆ ಇಲಾಖೆಯು ಹೂಡಿಕೆದಾರರ ಹಣಕಾಸು ವಹಿವಾಟುಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ಸರಿಯಾದ ದಾಖಲೆಗಳಿದ್ದರೆ ತೊಂದರೆ ಕಡಿಮೆ. ಇಲ್ಲದಿದ್ದರೆ ಆದಾಯ ತೆರಿಗೆ ನೋಟಿಸ್ ಕಳುಹಿಸುವುದು ಖಚಿತ.

ದೊಡ್ಡ ಮೊತ್ತದ ನಗದು ಠೇವಣಿ: 10 ಲಕ್ಷಕ್ಕಿಂತ ಹೆಚ್ಚಿನ ನಗದು ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದರೆ ಅದು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತಾನಾಗಿಯೇ ಬರುತ್ತದೆ. ನೀವು ಕಾನೂನುಬದ್ಧ ಆದಾಯವನ್ನು ಹೊಂದಿದ್ದರೆ ತೊಂದರೆ ಇಲ್ಲ. ಇಲ್ಲವಾದಲ್ಲಿ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುವುದು ಖಚಿತ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande