ಬ್ರೆಜಿಲ್‌ನಲ್ಲಿ ಆತ್ಮಾಹುತಿ ಬಾಂಬ್‌ ದಾಳಿ
ಬ್ರೆಸಿಲಿಯಾ,14 ನವೆಂಬರ್(ಹಿ.ಸ.) : ಆ್ಯಂಕರ್ : ಬ್ರೆಜಿಲ್‌ ಸರ್ವೋಚ್ಚ ನ್ಯಾಯಾಲಯದ ಹೊರಗೆ ವ್ಯಕ್ತಿಯೊಬ್ಬ ಆತ್ಮಹುತಿ ಬಾಂಬ್‌ ದಾಳಿ ನಡೆಸಿರುವ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ನ್ಯಾಯಾಲಯದ ಪ್ರವೇಶಿಸಲು ಪ್ರಯತ್ನಿಸುವಾಗ ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಜಿ20 ಸಭೆಗೆ ಅಂತಿಮ
Suicide bombing in Brazil ahead of G20 summit – heightened anxiet


ಬ್ರೆಸಿಲಿಯಾ,14 ನವೆಂಬರ್(ಹಿ.ಸ.) :

ಆ್ಯಂಕರ್ : ಬ್ರೆಜಿಲ್‌ ಸರ್ವೋಚ್ಚ ನ್ಯಾಯಾಲಯದ ಹೊರಗೆ ವ್ಯಕ್ತಿಯೊಬ್ಬ ಆತ್ಮಹುತಿ ಬಾಂಬ್‌ ದಾಳಿ ನಡೆಸಿರುವ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ನ್ಯಾಯಾಲಯದ ಪ್ರವೇಶಿಸಲು ಪ್ರಯತ್ನಿಸುವಾಗ ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಜಿ20 ಸಭೆಗೆ ಅಂತಿಮ ತಯಾರಿ ನಡೆಸುತ್ತಿರುವ ಹೊತ್ತಿನಲ್ಲೇ ಸ್ಫೋಟ ಸಂಭವಿಸಿರುವುದು ಭದ್ರತಾ ಆತಂಕವನ್ನು ಉಂಟು ಮಾಡಿದೆ.

ನ್ಯಾಯಾಲಯದ ಕಟ್ಟಡದ ಸಮೀಪವಿರುವ ವಾಹನ ನಿಲುಗಡೆ ಸ್ಥಳದಲ್ಲಿ ಮೊದಲ ಸ್ಫೋಟ ಸಂಭವಿಸಿತು. ಬಳಿಕ ನ್ಯಾಯಾಲಯದ ಮುಂಭಾಗದಲ್ಲಿ ಎರಡನೇ ಸ್ಫೋಟ ಸಂಭವಿಸಿದೆ. ಸ್ಫೋಟದ ಪಳೆಯುಳಿಕೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ನ್ಯಾಯಾಲಯದ ಕಟ್ಟಡಕ್ಕೆ ಹಾನಿ ಮಾಡಲು ಸ್ಫೋಟ ನಡೆಸಿದ ಶಂಕಿತರು ಪ್ರಯತ್ನಿಸಿದ್ದರು. ಸದ್ಯ ಮೃತರ ಗುರುತು ಪತ್ತೆಯಾಗಿಲ್ಲ.

ಜಿ20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಸೇರಿ ಇಪ್ಪತ್ತು ದೇಶದ ನಾಯಕರು ಭಾಗಿಯಾಗಲಿದ್ದಾರೆ. ಅದಕ್ಕೂ ಮುನ್ನ ನಡೆದಿರುವ ಈ ಸ್ಫೋಟ ಆತಂಕವನ್ನು ಹೆಚ್ಚಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande