ಎಲೋನ್ ಮಸ್ಕ್, ವಿವೇಕ್ ರಾಮಸ್ವಾಮಿಗೆ ಮಹತ್ವದ ಹುದ್ದೆ  
ವಾಷಿಂಗ್ಟನ್, 13 ನವೆಂಬರ್(ಹಿ.ಸ.) : ಆ್ಯಂಕರ್ : ಮುಂದಿನ ವರ್ಷದ ಜನವರಿಯಿಂದ ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ.ಟ್ರಂಪ್ ಸರ್ಕಾರದಲ್ಲಿ ಭಾರತ ಮೂಲದ ವಿವೇಕ್ ರಾಮಸ್ವಾಮಿ ಹಾಗೂ ಖ್ಯಾತ ಉದ್ಯಮಿ ಎಲಾನ್​ಮಸ್ಕ್​ಗೆ ಮಹತ್ವದ ಹುದ್ದೆ ನೀಡಲಾಗಿದೆ. ಸರ್ಕಾರದ ದಕ್ಷತೆಯ ಇಲಾ
ಎಲೋನ್ ಮಸ್ಕ್, ವಿವೇಕ್ ರಾಮಸ್ವಾಮಿಗೆ ತನ್ನ ಸರ್ಕಾರದಲ್ಲಿ ಮಹತ್ವದ ಹುದ್ದೆ ನೀಡಿದ ಡೊನಾಲ್ಡ್ ಟ್ರಂಪ್


ವಾಷಿಂಗ್ಟನ್, 13 ನವೆಂಬರ್(ಹಿ.ಸ.) :

ಆ್ಯಂಕರ್ : ಮುಂದಿನ ವರ್ಷದ ಜನವರಿಯಿಂದ ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ.ಟ್ರಂಪ್ ಸರ್ಕಾರದಲ್ಲಿ ಭಾರತ ಮೂಲದ ವಿವೇಕ್ ರಾಮಸ್ವಾಮಿ ಹಾಗೂ ಖ್ಯಾತ ಉದ್ಯಮಿ ಎಲಾನ್​ಮಸ್ಕ್​ಗೆ ಮಹತ್ವದ ಹುದ್ದೆ ನೀಡಲಾಗಿದೆ. ಸರ್ಕಾರದ ದಕ್ಷತೆಯ ಇಲಾಖೆಯನ್ನು ಮುನ್ನಡೆಸಲಿದ್ದಾರೆ.ಚುನಾವಣೆಗೂ ಮುನ್ನವೇ ಟ್ರಂಪ್ ಮಸ್ಕ್ ಗೆ ದೊಡ್ಡ ಜವಾಬ್ದಾರಿ ನೀಡುವ ಸುಳಿವು ನೀಡಿದ್ದರು.

ಶ್ರೇಷ್ಟ ವ್ಯಕ್ತಿ ಎಲೋನ್ ಮಸ್ಕ್ ಅವರು ಅಮೆರಿಕದ ದೇಶಪ್ರೇಮಿ ವಿವೇಕ್ ರಾಮಸ್ವಾಮಿ ಅವರೊಂದಿಗೆ ಸರ್ಕಾರಿ ದಕ್ಷತೆಯ ಇಲಾಖೆಯನ್ನು ಮುನ್ನಡೆಸಲಿದ್ದಾರೆ ಎಂದು ಘೋಷಿಸಲು ನಾನು ಸಂತಸಪಡುತ್ತಿದ್ದೇನೆ ಎಂದು ಟ್ರಂಪ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಇಬ್ಬರು ಸರ್ಕಾರಿ ಅಧಿಕಾರಶಾಹಿ, ಹೆಚ್ಚುವರಿ ನಿರ್ಬಂಧಗಳು, ಅನವಶ್ಯಕ ವೆಚ್ಚಗಳನ್ನು ಕಡಿತಗೊಳಿಸುವುದು ಮತ್ತು ಫೆಡರಲ್ ಏಜೆನ್ಸಿಗಳನ್ನು ಪುನರ್‌ರಚಿಸಲಿದ್ದಾರೆ. 'ಅಮೆರಿಕದ ರಕ್ಷಣೆಯ ಚಳವಳಿ'ಗೆ ಇಂಥ ಕ್ರಮಗಳು ಅವಶ್ಯಕ. ಅಷ್ಟೇ ಅಲ್ಲದೇ, ಸರ್ಕಾರಿ ದುಂದುವೆಚ್ಚದಲ್ಲಿ ಭಾಗಿಯಾಗುವ ಸಾಕಷ್ಟು ಜನರಿಗೂ ನಮ್ಮ ಕ್ರಮಗಳು ಆಘಾತ ನೀಡಲಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ರಾಮಸ್ವಾಮಿ ಅವರನ್ನು ವಿದೇಶಾಂಗ ಸಚಿವರನ್ನಾಗಿ ಮಾಡುವ ಸಾಧ್ಯತೆಗಳು ಮೊದಲೇ ವ್ಯಕ್ತವಾಗಿದ್ದವು. ಹೊಸ ಆರ್ಥಿಕ ಯೋಜನೆಯ ಭಾಗವಾಗಿ, ಟ್ರಂಪ್ ಸೆಪ್ಟೆಂಬರ್‌ನಲ್ಲಿ ಸರ್ಕಾರಿ ದಕ್ಷತೆ ಆಯೋಗವನ್ನು ಸ್ಥಾಪಿಸಲು ಪ್ರಸ್ತಾಪಿಸಿದ್ದರು. ಆ ಸಮಯದಲ್ಲಿ ಮಸ್ಕ್ ರಿಪಬ್ಲಿಕನ್ ನಾಯಕ ಶ್ವೇತಭವನಕ್ಕೆ ಹಿಂತಿರುಗಿದರೆ, ಈ ಇಲಾಖೆಯನ್ನು ತೆಗೆದುಕೊಳ್ಳಲು ಸಿದ್ಧ ಎಂದು ಹೇಳಿದ್ದರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande