ವಾಷಿಂಗ್ಟನ್ ,12 ನವೆಂಬರ್(ಹಿ.ಸ.) :
ಆ್ಯಂಕರ್ : ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿವೃತ್ತ ಸೇನಾ ರಾಷ್ಟ್ರೀಯ ಗಾರ್ಡ್ ಅಧಿಕಾರಿ ಹಾಗೂ ಫ್ಲೋರಿಡಾದ ರಿಪಬ್ಲಿಕನ್ ನಾಯಕ ಮೈಕ್ ವಾಲ್ಟ್ಜ್ ಅವರನ್ನು ತಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಆಯ್ಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫ್ಲೋರಿಡಾ ರಿಪಬ್ಲಿಕನ್ ನಾಯಕ ಮೈಕ್ ವಾಲ್ಟ್ಜ್ ಅವರನ್ನು ಈ ಸ್ಥಾನದಲ್ಲಿ ಸೇವೆ ಸಲ್ಲಿಸುವಂತೆ ಡೊನಾಲ್ಡ್ ಟ್ರಂಪ್ ರವರು ಕೇಳಿಕೊಂಡಿದ್ದಾರೆ. ವಾಲ್ಟ್ಜ್ ಅವರು ಈ ಹುದ್ದೆಯನ್ನು ನಿರ್ವಹಿಸುವಾಗ ಭೌಗೋಳಿಕ ರಾಜಕೀಯಕ್ಕೆ ಸಂಬಂಧಿಸಿದ ಅನೇಕ ಸಂಕೀರ್ಣ ವಿಷಯಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ಇದು ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಹಮಾಸ್ ಯುದ್ಧವನ್ನು ಒಳಗೊಂಡಿದೆ. ಮೈಕ್
ವಾಲ್ಟ್ಜ್ ರವರು ಟ್ರಂಪ್ ಅವರ ಕಟ್ಟಾ ಬೆಂಬಲಿಗ. ಅವರು ಅಫ್ಘಾನಿಸ್ತಾನದಲ್ಲಿ ಹಲವಾರು ಬಾರಿ ಸೇವೆ ಸಲ್ಲಿಸಿದ್ದಾರೆ. ಇದರೊಂದಿಗೆ, ಅವರು ಪೆಂಟಗನ್‌ನಲ್ಲಿ ಎರಡು ಬಾರಿ ನೀತಿ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಾಮ್ ಬೀಚ್‌ನಲ್ಲಿರುವ ಟ್ರಂಪ್‌ರ ಮಾರ್ ಎ ಲಾಗೋ ರೆಸಾರ್ಟ್‌ನಲ್ಲಿ ವಾಲ್ಟ್ಜ್ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್