ಕೋಲಾರ,30 ಅಕ್ಟೋಬರ್ (ಹಿ.ಸ.):
ಆ್ಯಂಕರ್ :ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪತ್ರಿಕೋದ್ಯಮ ವಿಭಾಗದಲ್ಲಿ ಟಿ.ವಿ-೯ ಜಿಲ್ಲಾ ವರದಿಗಾರ ರಾಜೇಂದ್ರಸಿಂಹ ಬಿ.ಎಲ್ ಹಾಗೂ ಸಂಜೆವಾಣಿ ಜಿಲ್ಲಾ ವರದಿಗಾರ ಕೆ.ಬಿ.ಜಗದೀಶ್ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಟಿ.ವಿ-೯ ಜಿಲ್ಲಾ ವರದಿಗಾರ ರಾಜೇಂದ್ರಸಿಂಹ ಬಿ.ಎಲ್ ಹಾಗೂ ಸಂಜೆವಾಣಿ ಜಿಲ್ಲಾ ವರದಿಗಾರ ಕೆ.ಬಿ.ಜಗದೀಶ್ ಅವರಿಗೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಅಭಿನಂದಿಸಿದ್ದಾರೆ.
ಚಿತ್ರ : ಕೋಲಾರ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವ ಟಿ.ವಿ.-೯ ವರದಿಗಾರ ರಾಜೇಂದ್ರಸಿ0ಹ ಮತ್ತು ಸಂಜೆವಾಣಿ ವರದಿಗಾರ ಕೆ.ಬಿ.ಜಗದೀಶ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್