ಹೊಸಪೇಟೆ : ವಿದ್ಯಾರ್ಥಿ ನಿಲಯ ಬಾಡಿಗೆ ಕಟ್ಟಡಕ್ಕಾಗಿ ಅರ್ಜಿ ಆಹ್ವಾನ
ಹೊಸಪೇಟೆ, 30 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯಕ್ಕಾಗಿ ವಿಶಾಲ, ಸುಸಜ್ಜಿತ ಕಟ್ಟಡ ಹೊಂದಿದ ಮಾಲಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ವಸತಿ ನಿಲಯದ ನಿರ್ವಹಣೆಗಾಗಿ 150 ವಿದ್ಯಾರ್ಥ
ಹೊಸಪೇಟೆ : ವಿದ್ಯಾರ್ಥಿ ನಿಲಯ ಬಾಡಿಗೆ ಕಟ್ಟಡಕ್ಕಾಗಿ ಅರ್ಜಿ ಆಹ್ವಾನ


ಹೊಸಪೇಟೆ, 30 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯಕ್ಕಾಗಿ ವಿಶಾಲ, ಸುಸಜ್ಜಿತ ಕಟ್ಟಡ ಹೊಂದಿದ ಮಾಲಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ವಸತಿ ನಿಲಯದ ನಿರ್ವಹಣೆಗಾಗಿ 150 ವಿದ್ಯಾರ್ಥಿಗಳ ವಾಸಕ್ಕೆ ಸಾಕಾಗುವಷ್ಟು ಸ್ಥಳಾವಕಾಶ ಹೊಂದಿದ ಸುಸಜ್ಜಿತ ಕಟ್ಟಡ, ಅಡುಗೆ ಮನೆ, ಊಟದ ಹಾಲ್, ಉಗ್ರಾಣ, ಕಚೇರಿಗೆ ಸಾಕಾಗುವಷ್ಟು 10 ಕೊಠಡಿಗಳು, 5 ಸ್ನಾನದ ಗೃಹಗಳು, 5 ಶೌಚಾಲಯಗಳು ಹಾಗೂ ಕಟ್ಟಡಕ್ಕೆ ಸ್ವಂತ ಕೊಳವೆಬಾವಿ ಹೊಂದಿದರುವ ನಗರದ ಮದ್ಯ ಭಾಗದಲ್ಲಿರುವ ಕಟ್ಟಡ ಅವಶ್ಯವಾಗಿರುತ್ತದೆ.

ವಿದ್ಯಾರ್ಥಿನಿಲಯದ ನಿರ್ವಹಣೆಗೆ ಮಾಹೆಯಾನ ಬಾಡಿಗೆ ಆಧಾರದ ಮೇಲೆ ಪಡೆಯುವ ಕಟ್ಟಡಕ್ಕೆ ಲೋಕೋಪಯೋಗಿ ಇಲಾಖೆಯಿಂದ ನಿಗದಿಪಡಿಸಿದ ದರದಲ್ಲಿ ಬಾಡಿಗೆ ನಿಡಲಾಗುವುದು. ಅರ್ಹ ಕಟ್ಟಡ ಹೊಂದಿದ ಮಾಲೀಕರು ಮೊ. 9742423530, 9060103761 ಗೆ ಅಥವಾ ಹೊಸಪೇಟೆಯ ಸಂಡೂರು ರಸ್ತೆಯಲ್ಲಿರುವ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande