ವಾಷಿಂಗ್ಟನ್ ಡಿಸಿ, 26 ಅಕ್ಟೋಬರ್ (ಹಿ.ಸ.):
ಆ್ಯಂಕರ್: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ೨೦೨೪ ರ ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್ ವಾಷಿಂಗ್ಟನ್, ಡಿಸಿ ಯ ವಾರ್ಷಿಕ ಸಭೆಯ ನಂತರ ಜರ್ಮನ್ ಹಣಕಾಸು ಸಚಿವ ಕ್ರಿಶ್ಚಿಯನ್ ಲಿಂಡ್ನರ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಉಭಯ ನಾಯಕರು ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಹಣಕಾಸು ಇಲಾಖೆ ಹಣಕಾಸು ನಿರ್ವಹಣೆ, ಫಿನ್‌ಟೆಕ್, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಭಾರತದಲ್ಲಿ ಹೂಡಿಕೆ ಮಾಡಲು ಜಾಗತಿಕ ಹೂಡಿಕೆದಾರರಿಗೆ ಗೇಟ್‌ವೇ ಆಗಿ ಐಎಫ್‌ಎಸ್‌ಸಿ ಮತ್ತು ಗಿಫ್ಟ್ ಸಿಟಿಯಲ್ಲಿನ ಅವಕಾಶಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದು, ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಭಾರತದ ಅನುಕೂಲಕರ ಮೌಲ್ಯಮಾಪನಕ್ಕಾಗಿ ಜರ್ಮನಿಯ ಹಣಕಾಸು ಸಚಿವ ಕ್ರಿಶ್ಚಿಯನ್ ಲಿಂಡ್ನರ್ ಅವರನ್ನು ನಿರ್ಮಲಾ ಸೀತಾರಾಮನ್ ಅಭಿನಂದಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa