ಹೈದರಾಬಾದ್, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಚಲನಚಿತ್ರ ಪ್ರಿಯರು ‘ಪುಷ್ಪ 2’ ಚಲನಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಟಾಲಿವುಡ್ ನಟ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟಿಸಿರುವ ಈ ಚಲನಚಿತ್ರ ಡಿಸೆಂಬರ್ 5ರಂದು ಬಿಡುಗಡೆ ಆಗಲಿದೆ. ಈಗ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನಿರೀಕ್ಷೆ ಜಾಸ್ತಿ ಇರುವುದರಿಂದ ಬಿಡುಗಡೆಗೂ ಮುನ್ನವೇ ನೂರಾರು ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಈ ಬಗ್ಗೆ ಚಲನಚಿತ್ರದ ನಿರ್ಮಾಪಕರೇ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ನಾನ್-ಥಿಯೆಟ್ರಿಕಲ್ ಹಕ್ಕುಗಳ ಮೂಲಕ 420 ಕೋಟಿ ರೂಪಾಯಿ ಸಿಕ್ಕಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.
‘ಪುಷ್ಪ 2’ ಚಲನಚಿತ್ರದ ನಿರ್ಮಾಪಕರು ಮತ್ತು ವಿತರಕರು ಇಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಚಲನಚಿತ್ರ ಗಳಿಕೆ ಬಗ್ಗೆ ಮಾತನಾಡಿದ್ದಾರೆ. ಎಲ್ಲರಿಗೂ ಅಚ್ಚರಿ ಆಗುವಂತಹ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. ‘ಈವರೆಗಿನ ಬೇರೆಲ್ಲ ಚಲನಚಿತ್ರಗಳಿಂತ ಅತಿ ಹೆಚ್ಚಿನ ಮೊತ್ತಕ್ಕೆ ಬಿಡುಗಡೆ ಮುನ್ನ ಒಂದು ವ್ಯವಹಾರವಾಗಿದೆ ಬಿಡುಗಡೆ ಬಳಿಕ ಆರಾಮಾಗಿ 1,000 ಕೋಟಿ ರೂಪಾಯಿ ಗಳಿಕೆ ಆಗಲಿದೆ’ ಎಂದಿದ್ದಾರೆ ನಿರ್ಮಾಪಕರು.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಚಲನಚಿತ್ರ ಆಗಸ್ಟ್ ತಿಂಗಳಲ್ಲೇ ಬಿಡುಗಡೆ ಆಗಬೇಕಿತ್ತು. ಆದರೆ ಚಲನಚಿತ್ರದ ಕೆಲಸಗಳು ಬಾಕಿ ಇರುವ ಕಾರಣದಿಂದ ಚಲನಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಈಗ ಡಿಸೆಂಬರ್ 5ರಂದು ಚಲನಚಿತ್ರ ಬಿಡುಗಡೆ ಆಗಲಿದೆ ಎಂಬುದನ್ನು ತಿಳಿಸಲು ಚಿತ್ರತಂಡದವರು ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್