ಭಾರತ- ಮೆಕ್ಸಿಕೋ ಹೂಡಿಕೆಗೆ ಅಪಾರ ಅವಕಾಶ
ಮೆಕ್ಸಿಕೋ, 20 ಅಕ್ಟೋಬರ್(ಹಿ.ಸ.) : ಆ್ಯಂಕರ್ : ಭಾರತ ಮತ್ತು ಮೆಕ್ಸಿಕೋ ಜಂಟಿ ಪ್ರಯತ್ನಗಳ ಮೂಲಕ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಬಹುದಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭಾರತ-ಮೆಕ್ಸಿಕೋ, ವ್ಯಾಪಾರ ಮತ್ತು ಹೂಡಿಕೆ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
Nirmala Sitharaman


ಮೆಕ್ಸಿಕೋ, 20 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಭಾರತ ಮತ್ತು ಮೆಕ್ಸಿಕೋ ಜಂಟಿ ಪ್ರಯತ್ನಗಳ ಮೂಲಕ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಬಹುದಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಭಾರತ-ಮೆಕ್ಸಿಕೋ, ವ್ಯಾಪಾರ ಮತ್ತು ಹೂಡಿಕೆ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೈವಿಧ್ಯತೆಯ ಅದರಲ್ಲೂ ಅರೆವಾಹಕಗಳು, ಸರ್ಕ್ಯೂಟ್‌ಬೋರ್ಡ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಸ್ಥಿತಿಸ್ಥಾಪಕತ್ವ ಅಗತ್ಯ ಎಂದು ಪ್ರತಿಪಾದಿಸಿದರು.

ಉಭಯ ದೇಶಗಳು ಆರ್ಥಿಕ ಸಹಕಾರ ವೃದ್ಧಿಗೆ ವಿಪುಲ ಅವಕಾಶಗಳನ್ನು ಹೊಂದಿದ್ದು, ಔಷಧ, ತಯಾರಿಕೆ ಮತ್ತು ವಾಹನ ವಲಯಗಳಲ್ಲಿ ಬೆಳವಣಿಗೆ ಮತ್ತು ಹೂಡಿಕೆಗೆ ಅಪಾರ ಅವಕಾಶವಿದೆ ಎಂದು ಅವರು ಹೇಳಿದರು.

ಫಿನ್‌ಟೆಕ್ ಮತ್ತು ಡಿಜಿಟಲ್ ಪಾವತಿಗಳಲ್ಲಿ ಗಡಿಯಾಚೆಗಿನ ಸಹಕಾರ ಮತ್ತು ನಾವಿನ್ಯತೆಗೆ ಎರಡು ದೇಶಗಳ ಪಾಲುದಾರಿಕೆಯು ಉತ್ತಮ ವೇದಿಕೆ ಒದಗಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಂದು ಕಾರ್ಯಕ್ರಮದಲ್ಲಿ ಮೆಕ್ಸಿಕೋದ ಹಣಕಾಸು ಕಾರ್ಯದರ್ಶಿ ಅವರನ್ನು ನಿರ್ಮಲಾ ಸೀತಾರಾಮನ್ ಭೇಟಿ ಮಾಡಿ ಸಹಯೋಗ ಆಧಾರಿತ ಡಿಜಿಟಲ್ ಪರಿವರ್ತನೆಯ ಅನ್ವೇಷಣೆಗೆ ಭಾರತದ ಆಸಕ್ತಿಯನ್ನು ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande