ಇಂದು ಸಾಂಸ್ಕೃತಿಕ ಸ್ಥಳಗಳಿಗೆ ರಾಷ್ಟ್ರಪತಿ ಭೇಟಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಮಲಾವಿ ಪ್ರವಾಸ; ಕೊನೆಯ ದಿ ಇಂದು ಸಾಂಸ್ಕೃತಿಕ ಸ್ಥಳಗಳಿಗೆ ಭೇಟ
ರಾಷ್ಟ್ರಪತಿ ದ್ರೌಪದಿ ಮುರ್ಮು ಮಲಾವಿ ಪ್ರವಾಸ; ಕೊನೆಯ ದಿನವಾದ ಇಂದು ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ


ಲಿಲೋಂಗ್ವೆ, 19 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಮಲಾವಿ ದೇಶಕ್ಕೆ ಕೈಗೊಂಡಿರುವ ಮೂರು ದಿನಗಳ ಪ್ರವಾಸದ ಕೊನೆಯ ದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಲ್ಲಿನ ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿನ್ನೆ ಮಲಾವಿ ಅಧ್ಯಕ್ಷ ಲಾಜರಸ್ ಚಕ್ವೇರಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಭಾರತ-ಮಲಾವಿ ನಡುವೆ ನಿಯೋಗ ಮಟ್ಟದ ಮಾತುಕತೆ ನಡೆಯಿತು.

ಕಲೆ ಮತ್ತು ಸಂಸ್ಕೃತಿ, ಕ್ರೀಡೆ, ಯುವಜನ ಮತ್ತು ಔಷಧೀಯ ಕ್ಷೇತ್ರಗಳಲ್ಲಿ ನಾಲ್ಕು ತಿಳುವಳಿಕೆ ಪತ್ರಗಳಿಗೆ ಉಭಯ ದೇಶಗಳು ಸಹಿ ಹಾಕಿವೆ. ಭಾರತವು ೧ ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ಮಲಾವಿಗೆ ಪೂರೈಸುವುದಾಗಿ ಘೋಷಿಸಿದೆ.

ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಲಾವಿಯಲ್ಲಿ ಶಾಶ್ವತ ಕೃತಕ ಅಂಗ ಬದಲಿ ಕೇಂದ್ರವನ್ನು ತೆರೆಯುವುದಾಗಿ ಘೋಷಿಸಿದರು.

ಇಂದು ರಾಷ್ಟ್ರಪತಿಗಳು ಶ್ರೀ ರಾಧಾ ಕೃಷ್ಣ ದೇವಸ್ಥಾನ ಮತ್ತು ಪ್ರಸಿದ್ಧ ಮಲಾವಿ ಸರೋವರಕ್ಕೆ ಭೇಟಿ ನೀಡಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande