ಸುಲ್ತಾನ್ ಆಫ್ ಜೋಹರ್ ಕಪ್ ಹಾಕಿ : ಭಾರತ -ಬ್ರಿಟನ್ ಮುಖಾಮುಖಿ
ಸುಲ್ತಾನ್ ಆಫ್ ಜೋಹರ್ ಕಪ್ ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ ೪-೨ ಗೋಲುಗಳ ಜಯ
ಮುಖಾಮುಖಿ


ಕೌಲಾಲಂಪುರ್, 20 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್ ಆಫ್ ಜೋಹರ್ ಕಪ್ ೨೦೨೪ ಹಾಕಿ ಪಂದ್ಯಾವಳಿಯಲ್ಲಿ ಭಾರತೀಯ ಜೂನಿಯರ್ ಪುರುಷರ ತಂಡ ತಮ್ಮ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ ೪-೨ ಗೋಲುಗಳ ಜಯದೊಂದಿಗೆ ಶುಭಾರಂಭ ಕಂಡಿದೆ.

ಭಾರತದ ಪರ ಅಮೀರ್ ಅಲಿ, ಗುರ್ಜೋತ್ ಸಿಂಗ್, ಆನಂದ್ ಸೌರಭ್ ಕುಶ್ವಾಹಾ ಹಾಗೂ ಅಂಕಿತ್ ಪಾಲ್ ಒಟ್ಟು ೪ ಗೋಲು ಗಳಿಸಿದರು.

ಭಾರತೀಯ ಜೂನಿಯರ್ ಪುರುಷರ ತಂಡದ ತರಬೇತುದಾರರಾಗಿ ಯಶಸ್ವಿಯಾಗಿ ಪದಾರ್ಪಣೆ ಮಾಡುವ ಮೂಲಕ ತಮ್ಮ ಹಾಕಿ ವೃತ್ತಿಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ ಒಲಿಂಪಿಕ್ಸ್ ಕ್ರೀಡಾಪಟು ಪಿ.ಆರ್. ಶ್ರೀಜೇಶ್ ಅವರಿಗೆ ಈ ಪಂದ್ಯ ಮೈಲಿಗಲ್ಲಾಯಿತು.

ಇಂದು ನಡೆಯುವ ಪಂದ್ಯದಲ್ಲಿ ಭಾರತ ತಂಡ, ಬ್ರಿಟನ್ ವಿರುದ್ಧ ಸೆಣಸಲಿದೆ. ಪಂದ್ಯ ಭಾರತೀಯ ಕಾಲಮಾನ ಅಪರಾಹ್ನ ೧.೩೫ಕ್ಕೆ ಆರಂಭವಾಗಲಿದೆ. ನಿನ್ನೆ ನಡೆದ ಪಂದ್ಯದಲ್ಲಿ ಬ್ರಿಟನ್, ಆಸ್ಟ್ರೇಲಿಯಾವನ್ನು ೩-೧ ಗೋಲುಗಳಿಂದ ಸೋಲಿಸಿತು. ೨೦೧೧ ರಿಂದ ನಡೆಯುತ್ತಿರುವ ಸುಲ್ತಾನ್ ಆಫ್ ಜೋಹರ್ ಕಪ್ ನಲ್ಲಿ, ಭಾರತ ಮತ್ತು ಬ್ರಿಟನ್ ಮೂರು ಬಾರಿ ಪ್ರಶಸ್ತಿಯನ್ನು ಗೆದ್ದ ಮೊದಲ ತಂಡಗಳಾಗಿವೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande