ಪಂಚತಂತ್ರ ಕಥೆ ಹೇಳುವ ಸ್ಪರ್ಧೆ ಬಹುಮಾನ ವಿತರಣಾ ಕಾರ್ಯಕ್ರಮ
ಪಂಚತಂತ್ರ ಕಥೆ ಹೇಳುವ ಸ್ಪರ್ಧೆ ಬಹುಮಾನ ವಿತರಣಾ ಕಾರ್ಯಕ್ರಮ
ಪಂಚತಂತ್ರ ಕಥೆ ಹೇಳುವ ಸ್ಪರ್ಧೆ ಬಹುಮಾನ ವಿತರಣಾ ಕಾರ್ಯಕ್ರಮ


ಬೆಂಗಳೂರು, 18 ಅಕ್ಟೋಬರ್ (ಹಿ.ಸ.):

ಆ್ಯಂಕರ್ : ಹೈಸ್ಕೂಲ್‌ ಮಕ್ಕಳಿಗೆ ಪಂಚತಂತ್ರ ಕಥೆ ಹೇಳುವ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಬೆಂಗಳೂರು ಮಹಾನಗರದ ವತಿಯಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಶಾಲೆಗಳಲ್ಲಿ 8, 9 ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಇದೇ ಆಗಸ್ಟ್‌-

ಸೆಪ್ಟೆಂಬರ್‌ ತಿಂಗಳಲ್ಲಿ ಪಂಚತಂತ್ರದ ಯಾವುದಾದರೂ ಒಂದು ಕಥೆಯನ್ನು, ಅದರ ನೀತಿಯನ್ನೂ ಸೇರಿಸಿ ಮಕ್ಕಳು ತಮ್ಮದೇ ವಾಕ್ಯಗಳಲ್ಲಿ ಕಥೆ ಹೇಳುವ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಸಂಪೂರ್ಣ ಉಚಿತವಾಗಿತ್ತು. ವಿದ್ಯಾರ್ಥಿಗಳು ಹಾಗೂ ಶಾಲೆಗಳಿಂದ ಅತ್ಯುತ್ತಮ ಸ್ಪಂದನೆ ದೊರಕಿತು. 95 ಶಾಲೆಗಳಿಂದ 520 ಮಕ್ಕಳು ಭಾಗವಹಿಸಿದ್ದರು. ಇದೀಗ ಆಯ್ಕೆ ಪ್ರಕ್ರಿಯೆ ಪೂರ್ಣವಾಗಿದೆ. 8,9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ತರಗತಿಗೆ ಭಾಗವಹಿಸಿದ್ದರು. ಇದೀಗ ಆಯ್ಕೆ ಪ್ರಕ್ರಿಯೆ ಪೂರ್ಣವಾಗಿದೆ. 8,9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ತರಗತಿಗೆ ಪ್ರತ್ಯೇಕವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು, 6 ವಿಶೇಷ ಬಹುಮಾನಗಳನ್ನು ಹಾಗೂ 70 ಸಮಾಧಾನಕರ ಬಹುಮಾನಗಳನ್ನು ವಿತರಣೆ ಮಾಡಲಾಗುತ್ತದೆ.

ದಿನಾಂಕ 20 ಅಕ್ಟೋಬರ್‌ 2024ರಂದು ಬೆಂಗಳೂರಿನ ಎನ್‌.ಆರ್.‌ ಕಾಲನಿಯಲ್ಲಿರುವ

ಸಿ.‌ ಅಶ್ವತ್ಥ್‌ ಕಲಾಭವನದಲ್ಲಿ ಬೆಳಗ್ಗೆ 10.00 ಗಂಟೆಗೆ ಬಹುಮಾನ ವಿತರಣಾ ಕಾರ್ಯಕ್ರಮವಿರಲಿದೆ. ಕಾರ್ಯಕ್ರಮದಲ್ಲಿ

ಖ್ಯಾತ ವಾಗ್ಮಿಗಳು, ಸಂಸ್ಕೃತಿ ಚಿಂತಕರೂ ಆದ ಶ್ರೀಮತಿ ವಿ.ಬಿ. ಆರತಿ ಅವರು, ಜಸ್ಟ್‌ ಬುಕ್ಸ್‌ ಸಂಸ್ಥೆಯ ಮಾಲೀಕರಾದ ಸುರೇಶ್ ನರಸಿಂಹ‌ ಅವರು ಮುಖ್ಯ ಅತಿಥಿಗಳಾಗಿರಲಿದ್ದಾರೆ. ಬೆಂಗಳೂರು ದಕ್ಷಿಣ ಅಧ್ಯಕ್ಷರಾದ ಡಾ. ಭಾನು ಅವರು, ಬೆಂಗಳೂರು ಗ್ರಾಮಾಂತರ ಅಧ್ಯಕ್ಷರಾದ ಘನಶ್ಯಾಮ್‌ ಅವರು ಉಪಸ್ಥಿತರಿರಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande