ವರ್ಷಗಳು ಕಳೆದರು ತೆರೆಯದ ಕೋಲಾರ ತಾಲ್ಲೂಕು ನರಸಾಪುರ ರೈತ ಸಂಪರ್ಕ ಕೇಂದ್ರ
ವರ್ಷಗಳು ಕಳೆದರು ತೆರೆಯದ ಕೋಲಾರ ತಾಲ್ಲೂಕು ನರಸಾಪುರ ರೈತ ಸಂಪರ್ಕ ಕೇಂದ್ರ
ಚಿತ್ರ - ಕೋಲಾರ ತಾಲ್ಲೂಕು ನರಸಾಪುರದಲ್ಲಿ ನಿರ್ಮಿಸಲಾಗಿರುವ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಲಾಗಿದೆ.


ವರ್ಷಗಳು ಕಳೆದರು ತೆರೆಯದ ಕೋಲಾರ ತಾಲ್ಲೂಕು ನರಸಾಪುರ ರೈತ ಸಂಪರ್ಕ ಕೇಂದ್ರ

ಕೋಲಾರ, ಅ ೧೮ (ಹಿ.ಸ) ಆಂಕರ್ : ತಾಲೂಕಿನ ನರಸಾಪುರ ಗ್ರಾಮದಲ್ಲಿ ೩ ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸದಾಗಿ ನಿರ್ಮಿಸಲಾದ ರೈತ ಸಂಪರ್ಕ ಕೇಂದ್ರವನ್ನು ಇದುವರೆಗೆ ಬಳಕೆ ಮಾಡದೇ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಲಾಗಿದೆ.

ಹಲವು ವರ್ಷಗಳಿಂದ ಇದ್ದ ರೈತ ಸಂಪರ್ಕ ಕೇಂದ್ರವನ್ನು ಗ್ರಾಮದ ಸಂತೆ ಮೈದಾನದಲ್ಲಿರುವ ನೂತನ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ ವರ್ಗಾಯಿಸಿ ಸುಮಾರು ೪ ವರ್ಷಗಳಾಗಿದೆ, ಕೃಷಿ ಇಲಾಖೆಯವರು ಹಳೆಯ ಜಾಗದಲ್ಲಿದ್ದ ರೈತ ಸಂಪರ್ಕ ಕೇಂದ್ರದ ಕಟ್ಟಡವನ್ನು ತಳ್ಳು ಹಾಕಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಿ ಸುಮಾರು ೩ ರಿಂದ ೪ ವರ್ಷಗಳಾಗಿದೆ.

ಆದರೆ ಇದೂವರೆಗೂ ಆ ಕಟ್ಟಡದ ಉದ್ಘಾಟನೆಯೂ ಸಹ ಆಗಿಲ್ಲ ಮತ್ತು ಬಳಕೆಯೂ ಸಹ ಆಗಿಲ್ಲ ಮತ್ತು ಈ ಕಟ್ಟಡದಲ್ಲಿ ಬಂದು ಯಾರೂ ವಾಸಿಸುತ್ತಿಲ್ಲ ಇದನ್ನು ಯಾತಕ್ಕಾಗಿ ನಿರ್ಮಾಣ ಮಾಡಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ, ಹಾಗಾದರೆ ಈ ಕಟ್ಟಡಕ್ಕೆ ಹಾಕಿರುವ ಮೊತ್ತ ಎಷ್ಟು ಯಾವ ಉದ್ದೇಶಕ್ಕಾಗಿ ನಿರ್ಮಾಣ ಮಾಡಿದ್ದಾರೆ ಎಂಬುದರ ನಾಮ ಫಲಕವೂ ಸಹ ಇಲ್ಲ, ಕಚೇರಿಯ ಹೆಸರು ಸಹ ಇಲ್ಲ, ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಕಟ್ಟಡ ಇಂದು ಅನಾಥವಾಗಿ ಯಾರೂ ಸಹ ವಾಸಿಸದೆ ಇದ್ದು ಯಾವೊಬ್ಬ ಅಧಿಕಾರಿಯೂ ಸಹ ಇದರ ಕಡೆ ಗಮನ ಹರಿಸುತ್ತಿಲ್ಲ.

ಈ ಕಟ್ಟಡವು ಭೂತ ಬಂಗಲೇ ರೀತಿಯಲ್ಲಿ ಇದೆ ಎಂದರೆ ತಪ್ಪಾಗಲಾರದು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವ ರೀತಿಯಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಗುತ್ತಿಗೆದಾರನನ್ನು ಉದ್ದಾರ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ, ಇದು ಯಾರಿಗಾಗಿ ಕಟ್ಟಿರುವುದು, ಏತಕ್ಕಾಗಿ ಕಟ್ಟಿರುವುದು ಇದರ ಉದ್ದೇಶವೇನು ಎಂಬುದರ ಬಗ್ಗೆ ಇದುವರೆಗೂ ಮಾಹಿತಿ ದೊರೆತಿರುವುದಿಲ್ಲ ಆದುದರಿಂದ ಸಂಬಂಧ ಪಟ್ಟ ಇಲಾಖೆಯವರು ಈ ಕಟ್ಟಡದ ಬಗ್ಗೆ ಗಮನ ಹರಿಸಬೇಕೆಂದು ರೈತರು ಒತ್ತಾಯ ಮಾಡಿದರು.

ಚಿತ್ರ - ಕೋಲಾರ ತಾಲ್ಲೂಕು ನರಸಾಪುರದಲ್ಲಿ ನಿರ್ಮಿಸಲಾಗಿರುವ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande