ಚಿನ್ನದ ಬೆಲೆ ಮತ್ತೆ ಹೆಚ್ಚಳ; ಬೆಳ್ಳಿ ದರದಲ್ಲಿ ಬದಲಾವಣೆ ಇಲ್ಲ
ಬೆಂಗಳೂರು, 17 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಭಾರತದಲ್ಲಿ ಚಿನ್ನದ ಬೆಲೆ ಗುರುವಾರವೂ ಹೆಚ್ಚಳವಾಗಿದೆ. ನಿನ್ನೆ ಗ್ರಾಮ್​ಗೆ 45 ರೂನಷ್ಟು ಏರಿಕೆಯಾಗಿದ್ದ ಹಳದಿ ಲೋಹದ ಬೆಲೆ ಇವತ್ತು 20 ರೂನಷ್ಟು ದುಬಾರಿಯಾಗಿದೆ. ವಿದೇಶಗಳಲ್ಲಿ ಇದರ ಬೆಲೆಯಲ್ಲಿ ಯಾವ ವ್ಯತ್ಯಯವೂ ಆಗಿಲ್ಲ. ಭಾರತದಲ್ಲಿ ಮಾತ್ರವೇ ಹೆಚ್ಚ
Gold Price Today On 12th July 2024, Gold And Silver Rat


ಬೆಂಗಳೂರು, 17 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತದಲ್ಲಿ ಚಿನ್ನದ ಬೆಲೆ ಗುರುವಾರವೂ ಹೆಚ್ಚಳವಾಗಿದೆ. ನಿನ್ನೆ ಗ್ರಾಮ್​ಗೆ 45 ರೂನಷ್ಟು ಏರಿಕೆಯಾಗಿದ್ದ ಹಳದಿ ಲೋಹದ ಬೆಲೆ ಇವತ್ತು 20 ರೂನಷ್ಟು ದುಬಾರಿಯಾಗಿದೆ.

ವಿದೇಶಗಳಲ್ಲಿ ಇದರ ಬೆಲೆಯಲ್ಲಿ ಯಾವ ವ್ಯತ್ಯಯವೂ ಆಗಿಲ್ಲ. ಭಾರತದಲ್ಲಿ ಮಾತ್ರವೇ ಹೆಚ್ಚಳ ಆಗಿರುವುದು. ಅಪರಂಜಿ ಚಿನ್ನದ ಬೆಲೆ 7,800 ರೂ ಗಡಿ ದಾಟಿ ಹೋಗಿದೆ.

22 ಕ್ಯಾರಟ್ ಚಿನ್ನದ ಬೆಲೆ 7,160 ರೂ ಆಗಿದೆ. 18 ಕ್ಯಾರಟ್ ಚಿನ್ನದ ಬೆಲೆ 6,000 ರೂ ಸಮೀಪಕ್ಕೆ ದೌಡಾಯಿಸುತ್ತಿದೆ. ಈ ಮಧ್ಯೆ ಬೆಳ್ಳಿ ಬೆಲೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. 92 ರೂ, 97 ರೂ ಮತ್ತು 103 ರೂನಲ್ಲಿ ವಿವಿಧೆಡೆ ಬೆಳ್ಳಿ ಬೆಲೆ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 71,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 78,110 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 71,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,200 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 17ಕ್ಕೆ)22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,600 ರೂ24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 78,110 ರೂ18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,580 ರೂಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,600 ರೂ24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 78,110 ರೂಬೆಳ್ಳಿ ಬೆಲೆ 10 ಗ್ರಾಂಗೆ: 920 ರೂವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)ಬೆಂಗಳೂರು: 71,600 ರೂಚೆನ್ನೈ: 71,600 ರೂಮುಂಬೈ: 71,600 ರೂದೆಹಲಿ: 71,750 ರೂಕೋಲ್ಕತಾ: 71,600 ರೂಕೇರಳ: 71,600 ರೂಅಹ್ಮದಾಬಾದ್: 71,650 ರೂಜೈಪುರ್: 71,750 ರೂಲಕ್ನೋ: 71,750 ರೂಭುವನೇಶ್ವರ್: 71,600 ರೂ

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande