60 ಬಿಲಿಯನ್​ ಡಾಲರ್​ಗೆ ತಲುಪಲಿದೆ ಭಾರತದ ಆನ್​ಲೈನ್ ಆಟದ ಉದ್ಯಮ
ನವದೆಹಲಿ, 15 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪ್ರಸ್ತುತ 3.1 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಆನ್ ಲೈನ್ ಆಟದ ವಲಯವು 2034 ರ ವೇಳೆಗೆ 60 ಬಿಲಿಯನ್ ಡಾಲರ್​ಗೆ ಬೆಳವಣಿಗೆಯಾಗುವ ಸಾಮರ್ಥ್ಯ ಹೊಂದಿದೆ. ಭಾರತದ ಆಟದ ಕ್ಷೇತ್ರಕ್ಕೆ ಅಮೆರಿಕ ಗಮನಾರ್ಹ ಕೊಡುಗೆ ನೀಡುತ್ತಿದ್ದು, ಆಟದ​ ವಲಯಕ್ಕೆ ಬಂದ ಒಟ್
ಆಟ


ನವದೆಹಲಿ, 15 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪ್ರಸ್ತುತ 3.1 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಆನ್ ಲೈನ್ ಆಟದ ವಲಯವು 2034 ರ ವೇಳೆಗೆ 60 ಬಿಲಿಯನ್ ಡಾಲರ್​ಗೆ ಬೆಳವಣಿಗೆಯಾಗುವ ಸಾಮರ್ಥ್ಯ ಹೊಂದಿದೆ.

ಭಾರತದ ಆಟದ ಕ್ಷೇತ್ರಕ್ಕೆ ಅಮೆರಿಕ ಗಮನಾರ್ಹ ಕೊಡುಗೆ ನೀಡುತ್ತಿದ್ದು, ಆಟದ​ ವಲಯಕ್ಕೆ ಬಂದ ಒಟ್ಟು 2.5 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಯಪೈಕಿ 1.7 ಬಿಲಿಯನ್ ಡಾಲರ್ ಅಮೆರಿಕದಿಂದಲೇ ಬಂದಿದೆ. ವಿಶೇಷವೆಂದರೆ, ಈ ಎಫ್​ಡಿಐ ಪೈಕಿ ಶೇಕಡಾ 90 ರಷ್ಟು ಎಫ್​ಡಿಐ ಪೇ-ಟು-ಪ್ಲೇ ವಿಭಾಗಕ್ಕೆ ಹರಿದು ಬಂದಿದ್ದು, ಇದು ವಲಯದ ಒಟ್ಟಾರೆ ಮೌಲ್ಯಮಾಪನದ ಶೇಕಡಾ 85 ರಷ್ಟಿದೆ.

ಇದು ವೇಗವಾಗಿ ಬೆಳೆಯುತ್ತಿರುವ ಭಾರತದ ಗೇಮಿಂಗ್ ಮಾರುಕಟ್ಟೆಯಲ್ಲಿ ಜಾಗತಿಕ ಹೂಡಿಕೆದಾರರು ಹೊಂದಿರುವ ಅಪಾರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. 2034 ರ ವೇಳೆಗೆ ಭಾರತದ ಗೇಮಿಂಗ್ ಉದ್ಯಮ 60 ಬಿಲಿಯನ್ ಡಾಲರ್​ಗೆ ವೃದ್ಧಿಯಾಗಲಿದೆ ಎಂದು ಯುನೈಟೆಡ್ ಸ್ಟೇಟ್ಸ್ ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟರ್​ಶಿಪ್ ಫೋರಂ ಅಧ್ಯಕ್ಷ ಮತ್ತು ಸಿಇಒ ಡಾ. ಮುಕೇಶ ಅಘಿ ಹೇಳಿದರು.

ಗೇಮರ್​ಗಳ ಠೇವಣಿ ಮೇಲೆ ಶೇ 28ರಷ್ಟು ಜಿಎಸ್ ಟಿ : ಆದಾಗ್ಯೂ, ಕಾನೂನು ಮತ್ತು ತೆರಿಗೆ ವಿಷಯದ ಸಮಸ್ಯೆಗಳು ಮುಂದುವರಿದಿವೆ. ಭಾರತದಲ್ಲಿ ಗೇಮರ್​ಗಳ ಠೇವಣಿಯ ಮೇಲೆ ಅತಿ ಹೆಚ್ಚು ಶೇ 28ರಷ್ಟು ಜಿಎಸ್​ಟಿ ವಿಧಿಸಲಾಗುತ್ತಿದೆ ಎಂದು ಯುಎಸ್ಐಎಸ್​ಪಿಎಫ್ ಮತ್ತು ಟಿಎಂಟಿ ಲಾ ಪ್ರಾಕ್ಟೀಸ್ ವರದಿ ಹೇಳಿದೆ.

ಜಾಗತಿಕವಾಗಿ ದೇಶೀಯ ನ್ಯಾಯವ್ಯಾಪ್ತಿಗಳಲ್ಲಿ ತೆರಿಗೆಗೆ ಆಧಾರವನ್ನು ರೂಪಿಸುವ ವಿಶ್ವಸಂಸ್ಥೆಯ ಕೇಂದ್ರ ಉತ್ಪನ್ನ ವರ್ಗೀಕರಣ ಆನ್ ಲೈನ್ ಆಟವನ್ನು ಆನ್ ಲೈನ್ ಜೂಜಾಟದಿಂದ ಪ್ರತ್ಯೇಕವಾಗಿ ವ್ಯಾಖ್ಯಾನಿಸುತ್ತದೆ ಎಂಬುದನ್ನು ವರದಿಯು ಎತ್ತಿ ತೋರಿಸಿದೆ.

600 ದಶಲಕ್ಷಕ್ಕೂ ಹೆಚ್ಚು ಗೇಮರ್​ಗಳ ದೊಡ್ಡ ಗ್ರಾಹಕ ನೆಲೆಯನ್ನು ಹೊಂದಿರುವ ಆಟದ​ ಉದ್ಯಮದಲ್ಲಿ ವೇಗವಾಗಿ ಹಣ ಗಳಿಸುವ ಅವಕಾಶಗಳು ಹೆಚ್ಚಾಗುತ್ತಿವೆ ಮತ್ತು ಉದ್ಯಮ ಗಣನೀಯ ರಫ್ತು ಅವಕಾಶವನ್ನು ಒದಗಿಸುತ್ತಿದೆ. ಆದಾಗ್ಯೂ, ಭಾರತೀಯ ಕಂಪನಿಗಳು ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸಲು, ಅಂತರರಾಷ್ಟ್ರೀಯ ಮಾನದಂಡಗಳಿಗೆ ಹೊಂದಿಕೆಯಾಗುವ ಪ್ರಗತಿಪರ ತೆರಿಗೆ ಮತ್ತು ನಿಯಂತ್ರಕ ನೀತಿಗಳೊಂದಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದು ಅಗತ್ಯವಿದೆ ಎಂದು ಅಘಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande