ನಟ ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರಕ್ಕೆ ಶೀರ್ಷಿಕೆ ನಿಗದಿ
ಬೆಂಗಳೂರು, 16 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಪರಭಾಷೆಯ ಚಲನಚಿತ್ರಗಳಲ್ಲಿ ಮಿಂಚಲು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಟ ಅರ್ಜುನ್ ಸರ್ಜಾ ಅವರು ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ನಿರಂಜನ್ ಸುಧೀಂದ್ರ ಅವರು ಪ್ರಧಾನ ಪಾತ್ರದಲ್ಲ
ಮುಖ್ಯಮಂತ್ರಿ


ಬೆಂಗಳೂರು, 16 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಪರಭಾಷೆಯ ಚಲನಚಿತ್ರಗಳಲ್ಲಿ ಮಿಂಚಲು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ನಟ ಅರ್ಜುನ್ ಸರ್ಜಾ ಅವರು ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ನಿರಂಜನ್ ಸುಧೀಂದ್ರ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಲನಚಿತ್ರಕ್ಕೆ ಶೀರ್ಷಿಕೆ ಕೂಡ ನಿಗದಿ ಆಗಿದೆ.

ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಸರ್ಜಾ ಮತ್ತು ನಿರಂಜನ್ ಜೋಡಿಯಾಗಿ ನಟಿಸಲಿರುವ ಚಲನಚಿತ್ರಕ್ಕೆ ‘ಸೀತಾ ಪಯಣ’ ಎಂಬ ಆಕರ್ಷಕ ಶೀರ್ಷಿಕೆಯನ್ನು ನಟ ಅರ್ಜುನ್ ಸರ್ಜಾ ಅವರು ಅಂತಿಮ ಮಾಡಿದ್ದಾರೆ. ಸದ್ಯ ಬಹುಭಾಷೆಗಳಲ್ಲಿ ಮೂಡಿ ಬರಲಿರುವ ಈ ಚಿತ್ರವು ಇದೊಂದು ಪ್ರೇಮ ಕಥೆ ಕುರಿತಾದ ಚಲನಚಿತ್ರ ಎನ್ನುವುದು ಖಾತರಿಯಾಗಿದೆ.

ನಿರಂಜನ್ ಸುಧೀಂದ್ರ, ಐಶ್ವರ್ಯಾ ಸರ್ಜಾ ಈ ಇಬ್ಬರನ್ನು ಜೋಡಿಯಾಗಿ ತೆರೆಯ ಮೇಲೆ ತೋರಿಸಲು ನಟ ಅರ್ಜುನ್ ಸರ್ಜಾ ಅವರು ಹೊರಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande