`ಗ್ರಾಮೀಣ ಕನ್ನಡ ಸಾಂಸ್ಕೃತಿಕೋತ್ಸವ 2024' ಚಾಲನೆ
ಡಿ. ಹಿರೇಹಾಳ್, 16 ಅಕ್ಟೋಬರ್ (ಹಿ.ಸ.) ಆ್ಯಂಕರ್:ಗಡಿ ಭಾಗದ ಸಂಸ್ಕೃತಿ ಮತ್ತು ಕಲೆಯನ್ನು ಬೆಳೆಸುವಲ್ಲಿ ಯುವ ಪೀಳಿಗೆ ಆಸಕ್ತಿ ತೋರಿಸಬೇಕು ಎಂದು ಗಡಿನಾಡ ಕನ್ನಡ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸುರೇಶ್ ಅವರು ಕರೆ ನೀಡಿದ್ದಾರೆ. ರಂಗ ಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಡಿ.ಕಗ್ಗಲ್, ಕನ್ನಡ ಮತ್ತು
ರಂಗಭೂಮಿಯು ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುತ್ತದೆ


ಡಿ. ಹಿರೇಹಾಳ್, 16 ಅಕ್ಟೋಬರ್ (ಹಿ.ಸ.)

ಆ್ಯಂಕರ್:ಗಡಿ ಭಾಗದ ಸಂಸ್ಕೃತಿ ಮತ್ತು ಕಲೆಯನ್ನು ಬೆಳೆಸುವಲ್ಲಿ ಯುವ ಪೀಳಿಗೆ ಆಸಕ್ತಿ ತೋರಿಸಬೇಕು ಎಂದು ಗಡಿನಾಡ ಕನ್ನಡ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸುರೇಶ್ ಅವರು ಕರೆ ನೀಡಿದ್ದಾರೆ.

ರಂಗ ಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಡಿ.ಕಗ್ಗಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ `ಗ್ರಾಮೀಣ ಕನ್ನಡ ಸಾಂಸ್ಕೃತಿಕೋತ್ಸವ 2024'ರ ಸಮೂಹ ನೃತ್ಯ, ರಂಗಗೀತೆಗಳು,ಸುಗಮ ಸಂಗೀತ, ತೊಗಲು ಗೊಂಬೆ ಪ್ರದರ್ಶನ, ಪೌರಾಣಿಕ ಹಾಗೂ ಐತಿಹಾಸಿಕ ನಾಟಕ ಪ್ರದರ್ಶನಗಳ ಎರಡು ದಿನಗಳ ಶಿಬಿರವನ್ನು ಗಡಿ ಗ್ರಾಮ ಡಿ.ಹಿರೇಹಾಳ್‍ನ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಡಿ. ಹಿರೇಹಾಳ್ ಮಂಡಲದ ಮಾಜಿ ಎಂಪಿಪಿ ಎನ್. ಪುಷ್ಪಾವತಿ ಅವರು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕಲೆಯನ್ನು ಅಭ್ಯಾಸ ಮಾಡಿದಲ್ಲಿ ಜೀವನದ ಮೌಲ್ಯಗಳನ್ನು ತಿಳಿಸಲು ನೆರವಾಗುತ್ತದೆ. ಗ್ರಾಮೀಣರು ಕಲೆಯಲ್ಲಿ ಅಪಾರ ಶ್ರೀಮಂತರು. ಉತ್ತಮ ಸಂದೇಶ ನೀಡುವ ನಾಟಕಗಳನ್ನು ಇಷ್ಟಪಡುತ್ತಾರೆ ಎಂದರು.

ಡಿ. ಹಿರೇಹಾಳ್ ಮಂಡಲ ಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಅವರು, ಗಡಿಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದಲ್ಲಿ ಭಾಷಾಸಾಮರಸ್ಯ ಹೆಚ್ಚಾಗಲಿದೆ ಎಂದರು.

ಪ್ರಾಥಮಿಕ ಪಾಠಶಾಲೆಯ ಪ್ರಧಾನೋಪಾಧ್ಯಾಯ ವಿ. ದೇವರಾಜ ನಾಯಕ ಅವರು, ವಿದ್ಯಾರ್ಥಿಗಳು ಮನೋ ಧೈರ್ಯವನ್ನು ಪಡೆಯಲು ರಂಗಕಲೆ ಪೂರಕ ಎಂದರು.

ವೇದಿಕೆಯಲ್ಲಿ ಸಿಂಗಾಡಿ ಜಗದೀಶ, ಪ್ರಧಾನೋಪಾಧ್ಯಾಯ ಎಲ್. ಶ್ರೀನಾಥ್, ವಿಜಯಕುಮಾರ್ ಅವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande