ಇಸ್ಲಾಮ್‌ಬಾದ್‌ನಲ್ಲಿ ಇಂದು ಶಾಂಘೈ ಶೃಂಗಸಭೆ
ಇಸ್ಲಾಮ್‌ಬಾದ್‌ನಲ್ಲಿ ಇಂದು ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ ಸಭೆಯಲ್ಲಿ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಭಾಗಿ
ಇಸ್ಲಾಮಾಬಾದ್


ಇಸ್ಲಾಮಾಬಾದ್, 16 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಇಂದು ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ ಸರ್ಕಾರಗಳ ಮುಖ್ಯಸ್ಥರ ಸಭೆಯಲ್ಲಿ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಭಾಗವಹಿಸಲಿದ್ದಾರೆ.

ಅವರು ಎರಡು ದಿನಗಳ ಭೇಟಿಗಾಗಿ ಕಳೆದ ರಾತ್ರಿ ನೆರೆ ರಾಷ್ಟ್ರದ ರಾಜಧಾನಿ ತಲುಪಿದ್ದಾರೆ. ಎಸ್ ಸಿಒ ಸಭೆ ಪಾಕಿಸ್ತಾನದ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಅದರಲ್ಲಿ ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಎಸ್‌ಸಿಒ ಸಂಸ್ಥೆಯಲ್ಲಿ ಭಾರತ ಅತ್ಯಂತ ಸಕ್ರೀಯ ರಾಷ್ಟ್ರವಾಗಿದ್ದು, ಸಂಸ್ಥೆಯೊಳಗಿನ ಹಲವು ಉಪಕ್ರಮ ಹಾಗೂ ಕಾರ್ಯತಂತ್ರಗಳಲ್ಲಿ ಭಾಗವಹಿಸುತ್ತಿದೆ.

ವ್ಯಾಪಾರ ಮತ್ತು ಆರ್ಥಿಕ ಅಭಿವೃದ್ಧಿ ಕಾರ್ಯಸೂಚಿಯೊಂದಿಗೆ ಎಸ್‌ಸಿಒದ ವಾರ್ಷಿಕ ಸಭೆಗಳು ನಡೆಯುತ್ತವೆ. ೯ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಅವರು ಹಲವು ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande