ಮುಂಬೈ, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನಟರಾದ ರಜನಿಕಾಂತ್, ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್ ನಟನೆಯ ‘ವೆಟ್ಟೈಯನ್’ ಚಲನಚಿತ್ರ ಮೊದಲ ದಿನ ಸಾಧಾರಣ ಗಳಿಕೆ ಮಾಡಿದೆ.
ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಚಲನಚಿತ್ರ ಮಿಶ್ರಪ್ರತಿಕ್ರಿಯೆ ಪಡೆದಿದೆ. ಈ ಕಾರಣದಿಂದ ಚಲನಚಿತ್ರ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ವಿವರ.
‘ವೆಟ್ಟೈಯಾನ್’ ಚಲನಚಿತ್ರ ಮೊದಲ ದಿನ ಭಾರತದ ಬಾಕ್ಸ್ ಆಫೀಸ್ನಲ್ಲಿ 30 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತಮಿಳಿನಿಂದ ಈ ಚಿತ್ರಕ್ಕೆ ಸಿಕ್ಕಿರೋದು ಕೇವಲ 26 ಕೋಟಿ ರೂಪಾಯಿ. ತೆಲುಗಿನಲ್ಲಿ 3.2 ಕೋಟಿ ರೂಪಾಯಿ, ಹಿಂದಿಯಲ್ಲಿ ಕೇವಲ 60 ಲಕ್ಷ ರೂಪಾಯಿ ಗಳಿಕೆ ಆಗಿದೆ. ಕನ್ನಡದಲ್ಲಿ ಕೇವಲ 5 ಲಕ್ಷ ರೂಪಾಯಿ ವ್ಯವಹಾರ ಆಗಿದೆ. 30 ಕೋಟಿ ರೂಪಾಯಿ ಎಂದರೆ ಅದು ದೊಡ್ಡ ಮೊತ್ತವೇ. ಆದರೆ, ನಟ ರಜನಿಕಾಂತ್ಗೆ ಇರೋ ಖ್ಯಾತಿಗೆ ಅದು ಕಡಿಮೆ ಎನ್ನಲಾಗಿದೆ.
ನಟ ಅಮಿತಾಭ್ ಬಚ್ಚನ್ ಅವರು ‘ವೆಟ್ಟೈಯನ್’ ಚಿತ್ರದಲ್ಲಿ ನಟಿಸಿದ್ದಾರೆ. ಅವರು ನಟಿಸಿದ ಕಾರಣಕ್ಕೆ ಚಲನಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಬೇಕಿತ್ತು. ಆದರೆ, ಚಿತ್ರವು ಹಿಂದಿಯಲ್ಲೂ ಅಂಥ ದೊಡ್ಡ ಹವಾ ಸೃಷ್ಟಿ ಮಾಡಿಲ್ಲ. ಇದು ತಂಡದ ಬೇಸರ ಹೆಚ್ಚಿಸಿದೆ. ಇಂದು (ಅಕ್ಟೋಬರ್ 11) ದಸರಾ ಪ್ರಯುಕ್ತ ರಜಾ ಇದೆ. ಇಂದು ಚಿತ್ರ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಲಿದೆಯೇ ಎನ್ನುವ ಕುತೂಹಲ ಮೂಡಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್