ವಿಯೆಂಟಿಯಾನ್, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರಿಂದು ಲಾವೊಸ್‌ನ ವಿಯೆಂಟಿಯಾನ್‌ನಲ್ಲಿ ೧೯ ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಶೃಂಗಸಭೆ, ಪೂರ್ವ ಏಷ್ಯಾ ಪ್ರದೇಶದಲ್ಲಿ ಕಾರ್ಯತಂತ್ರದ ವಿಶ್ವಾಸಾರ್ಹ ವಾತಾವರಣವನ್ನು ನಿರ್ಮಿಸಲು ಕೊಡುಗೆ ನೀಡುವ ಜೊತೆಗೆ ಭಾರತ ಸೇರಿದಂತೆ ಭಾಗವಹಿಸುವ ಇತರ ರಾಷ್ಟ್ರಗಳ ನಾಯಕರಿಗೆ ಪ್ರಾದೇಶಿಕ ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಅವಕಾಶ ಒದಗಿಸುತ್ತದೆ.
ಪೂರ್ವ ಏಷ್ಯಾ ಶೃಂಗಸಭೆ, ೧೦ ಆಸಿಯಾನ್ ದೇಶಗಳು ಮತ್ತು ಎಂಟು ಪಾಲುದಾರ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್, ರಷ್ಯಾ ಮತ್ತು ಅಮೆರಿಕಾವನ್ನು ಒಳಗೊಂಡಿದೆ. ವೀಕ್ಷಕರಾಗಿ ಟಿಮೋರ್-ಲೆಸ್ಟೆ ಸಹ ಪಾಲುದಾರರಾಗಿರುತ್ತದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಶೃಂಗಸಭೆಯ ನೇಪಥ್ಯದಲ್ಲಿ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದ್ದು, ಲಾವೊಸ್ ಅಧ್ಯಕ್ಷ ಥೋಂಗ್ಲೋನ್ ಸಿಸೌಲಿತ್ ಅವರನ್ನು ಭೇಟಿ ಮಾಡಲಿದ್ದಾರೆ.
ನಿನ್ನೆ ಅವರು ವಿಯೆಂಟಿಯಾನ್‌ನಲ್ಲಿ ಪ್ರಸ್ತುತ ಆಸಿಯಾನ್ ಅಧ್ಯಕ್ಷರಾಗಿ ಲಾವೊ ಪಿಡಿಆರ್ ಆಯೋಜಿಸಿದ್ದ ೨೧ ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್