ನಾನ್‌ಚಾಂಗ್, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಚೀನಾದ ನಾನ್‌ಚಾಂಗ್‌ನಲ್ಲಿ ನಡೆಯುತ್ತಿರುವ ಬಿಡಬ್ಲ್ಯೂಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ತನ್ವಿ ಶರ್ಮಾ, ಆಲಿಶಾ ನಾಯಕ್ ಮತ್ತು ಪ್ರಣಯ್ ಶೆಟ್ಟಿಗಾರ್ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದಿದ್ದಾರೆ.
೧೯ ವರ್ಷದೊಳಗಿನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ತಾನ್ವಿ ಜಪಾನ್‌ನ ನೀನಾ ಮತ್ಸುತಾ ಅವರನ್ನು ೨೧-೧೮, ೨೧-೧೩ ಸೆಟ್‌ಗಳಿಂದ ಸೋಲಿಸಿದರು. ಇದೇ ವಿಭಾಗದಲ್ಲಿ ಆಲಿಶಾ ೨೧-೧೭, ೨೧-೧೭ ಸೆಟ್‌ಗಳ ಅಂತರದಲ್ಲಿ ಮಲೇಷ್ಯಾದ ಲಿಮ್ ಝಿ ಶಿನ್ ಅವರನ್ನು ಮಣಿಸಿದರು.
ಇಂದು ನಡೆಯಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ತನ್ವಿ ಚೀನಾದ ಕ್ಸು ವೆನ್ ಜಿಂಗ್ ವಿರುದ್ಧ ಸೆಣಸಲಿದ್ದು, ಆಲಿಶಾ ಚೀನಾದ ಮತ್ತೊಬ್ಬ ಆಟಗಾರ್ತಿ ಡೈ ಕಿನ್ ಯಿ ಅವರನ್ನು ಎದುರಿಸಲಿದ್ದಾರೆ.
೧೯ ವರ್ಷದೊಳಗಿನವರ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಣಯ್ ೨೧-೧೪, ೨೧-೧೭ ಅಂತರದಲ್ಲಿ ಥಾಯ್ಲೆಂಡ್‌ನ ಏಕನಾಥ್ ಕಿಟ್ಕವಿನ್ರೋಜ್ ವಿರುದ್ಧ ಗೆಲುವು ಸಾಧಿಸಿದರು.
ಇಂದು ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಚೀನಾದ ವಾಂಗ್ ಝಿ ಜುನ್ ಅವರನ್ನು ಎದುರಿಸಲಿದ್ದಾರೆ.
ಇದಕ್ಕೂ ಮುನ್ನ, ಮಿಶ್ರ ಡಬಲ್ಸ್‌ನಲ್ಲಿ ಭಾರತದ ಭಾರ್ಗವ್ ರಾಮ್ ಅರಿಗೆಲಾ ಮತ್ತು ವೆನ್ನಾಲ ಕಲಗೊಟ್ಲ ಅವರು ನಿನ್ನೆ ನಡೆದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಹಾಂಗ್ ಯಿ ಲಿ ಮತ್ತು ಜಾಂಗ್ ಜಿಯಾ ಹಾನ್ ವಿರುದ್ಧ ೧೩-೨೧, ೧೬-೨೧ ಅಂತರದಲ್ಲಿ ಸೋಲು ಕಂಡರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್