ಕೋಲಾರ, 01 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಆಂಕರ್ : ಜಿಲ್ಲಾ ಪಶು ಸಂಗೋಪನಾ ಇಲಾಖೆಯ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಕಟ್ಟಿದ ಎಮ್ಮೆಯ ಕರು ಹೊಟ್ಟೆಯಲ್ಲಿ ಮೃತಪಟ್ಟಿದ್ದು, ಇದಕ್ಕೆ ಪಶು ಆಸ್ಪತ್ರೆಯ ವೈದ್ಯ ರಾಹುಲ್ ಹಾಗೂ ವಡಗೂರು ಆಸ್ಪತ್ರೆಯ ಪಶು ವೈದ್ಯ ನಾಗಣ್ಣ ಕಾರಣರಾಗಿದ್ದಾರೆ ಎಂದು ಬಸಾಪುರ ಕೊಟ್ಟೂರು ಗ್ರಾಮದ ರೈತ ಮಧುಸೂದನ್ ಆರೋಪಿಸಿದ್ದಾರೆ.
ಜಾನುವಾರುಗಳ ಅರೋಗ್ಯ ಹದಗೆಟ್ಟರೆ ಮೊದಲೇ ಇಬ್ಬರು ಪಶು ವೈದ್ಯರು ಜಾನುವಾರುಗಳಿಗೆ ಚಿಕಿತ್ಸೆಯನ್ನು ನೀಡುವುದಿಲ್ಲ, ಬದಲಿಗೆ ೨ ಸಾವಿರ ದಿಂದ ಸುಮಾರು ೫ ಸಾವಿರ ರೂ. ಗಳ ವರೆಗೂ ಹಣ ವನ್ನು ನೀಡಿದರೆ, ಜಾನುವಾರುಗಳ ಆರೋಗ್ಯ ಚಿಕಿತ್ಸೆಯನ್ನು ಮಾಡಲು ಮುಂದೆ ಬರುತ್ತಾರೆ ಎಂದು ಆರೋಪಿಸಿದ್ದಾರೆ.
ಪಶು ಇಲಾಖೆಯ ರಾಹುಲ್ ಮತ್ತು ನಾಗಣ್ಣ ವೈದ್ಯರ ಕರ್ತವ್ಯ ಲೋಪವಾಗಿದ್ದು, ಪಶು ಇಲಾಖೆ ಉಪನಿರ್ದೇಶಕ ಗಂಗಾ ತುಳಸಿರಾಮಯ್ಯ ಅವರು ಕಾರಣ ಕೇಳಿ ನೋಟಿಸ್ ನೀಡಬೇಕು ಎಂದು ಆಗ್ರಹಿಸಿದರು.
ಇಬ್ಬರು ವೈದ್ಯರಿಗೆ ಸರ್ಕಾರ ನಿಗದಿಪಡಿಸುವ ವ್ಯಾಪ್ತಿಯಲ್ಲಿ ವೈದ್ಯರು ಸೇವೆಯನ್ನು ಸಲ್ಲಿಸಬೇಕು, ಇನ್ನು ವ್ಯಾಪ್ತಿ ಮೀರಿ ಹೊರಗಿನ ತಾಲೂಕುಗಳಲ್ಲಿ ವೈದ್ಯರು ಸೇವೆಯನ್ನು ಮಾಡುವುದರಿಂದ ನಿಗದಿತ ಸಮಯದಲ್ಲಿ ಜಾನುವಾರುಗಳಿಗೆ ಯಾವುದೇ ರೀತಿಯ ಸೂಕ್ತ ಚಿಕಿತ್ಸೆಯನ್ನು ರೈತರು ಜಾನುವಾರುಗಳಿಗೆ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ರಾಹುಲ್ ಮತ್ತು ನಾಗಣ್ಣ ಪಶುವೈದ್ಯರ ವಿರುದ್ಧ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರನ್ನು ನೀಡಲು ಸಿದ್ದರಾಗಿದ್ದೇವೆ ಎಂದರು.
ಈ ಕೂಡಲೇ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಪಶು ಇಲಾಖೆಯ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಿ, ರೈತರು ಜಾನುವಾರುಗಳ ವಿಚಾರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗಬೇಕು ಎಂದು ಒತ್ತಾಯಿಸಿದರು.
ಚಿತ್ರ - ಕೋಲಾರದ ಪಶುಸಂಗೋಪನಾ ಇಲಾಖೆಯ ಆಸ್ಪತ್ರೆಯಲ್ಲಿ ಎಮ್ಮೆಗೆ ಚಿಕಿತ್ಸೆ ನೀಡುತ್ತಿರುವ ಪಶು ವೈದ್ಯರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್