ಬಳ್ಳಾರಿ, 01 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ರಂಗಮಂದಿರಗಳನ್ನು ನಿರ್ಮಿಸಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಲಿ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಬಳ್ಳಾರಿ ಜಿಲ್ಲಾಧ್ಯಕ್ಷ ಟಿ.ಹೆಚ್.ಎಂ. ಬಸವರಾಜ ಅವರು ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಧನಸಹಾಯ ಯೊಜನೆಯಡಿ ಬಳ್ಳಾರಿಯ ಅಭಿನಯ ಕಲಾ ಕೇಂದ್ರ ಸೋಮಸಮುದ್ರ ಗ್ರಾಮದ ಕೊಟ್ಟೂರು ಸ್ವಾಮಿ ಶಾಖಾ ಮಠದಲ್ಲಿ ಪ್ರದರ್ಶನ ಮಾಡಿದ `ಗ್ರಾಮೀಣ ಕಲಾ ಸಂಗಮ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದರಿಂದ ಕಲಾವಿದರಿಗೆ ಅನುಕೂಲವಾಗತ್ತದೆ. ಈ ಮೂಲಕ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮಗಳತ್ತ ಗಮನ ನೀಡಬೇಕು ಎಂದರು.
ಕೊಟ್ಟೂರು ಸ್ವಾಮಿ ಶಾಖಾ ಮಠದ ಬಸವಲಿಂಗ ಸ್ವಾಮಿಗಳು, ಹಳ್ಳಿಗಳಲ್ಲಿ ಜಾತಿ ಅಸಮಾನತೆ ನಿರ್ಮೂಲನೆ ಆಗಿದ್ದು, ಜನರು ಕಲಾವಿದರನ್ನು ಪೆÇೀಷಿಸಿ ಬೆಳೆಸುತ್ತಾರೆ ಎಂದರು.
ದಕ್ಷಿಣ ಮೂರ್ತಿ ಮತ್ತು ತಂಡದವರಿಂದ `ವಿಶ್ವಗುರು ಬಸವಣ್ಣ' ನಾಟಕ ಪ್ರದರ್ಶನಗೊಂಡಿತು. ದಾಸೋಹಿ ವೀರೇಶಸ್ವಾಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಭಿನಯ ಕಲಾಕೇಂದ್ರದ ಅಧ್ಯಕ್ಷ ಕೆ. ಜಗದೀಶ್ ವಂದಿಸಿದರು.
ಶ್ರೀಧರಗಡ್ಡೆ ಶಾಖಾ ಮಠದ ಮರಿಕೊಟ್ಟೂರ ದೇವರು, ದೊಡ್ಡ ಬಸವ ಗವಾಯಿಗಳು, ತೊಗಲುಗೊಂಬೆ ಕಲಾವಿದ ಕೆ. ಹೊನ್ನೂರಸ್ವಾಮಿ, ರಂಗನಟಿ ರೇಣುಕಾ ಬಾವಳ್ಳಿ, ಕೂಡ್ಲಿಗಿ ಜ್ಯೋತಿ ವೇದಿಕೆಯಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್