ಬಯಲುತುಂಬರಗುದ್ದಿ ಅಪಘಾತ ; ಇಬ್ಬರ ಸಾವು
ಕೂಡ್ಲಿಗಿ, 16 ಮಾರ್ಚ್ (ಹಿ.ಸ): ಆ್ಯಂಕರ್: ಬಯಲುತುಂಬರಗುದ್ದಿ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಹಾಕಲು ರಸ್ತೆ
ಬಯಲುತುಂಬರಗುದ್ದಿ ಅಪಘಾತ ; ಇಬ್ಬರ ಸಾವು


ಕೂಡ್ಲಿಗಿ, 16 ಮಾರ್ಚ್ (ಹಿ.ಸ):

ಆ್ಯಂಕರ್: ಬಯಲುತುಂಬರಗುದ್ದಿ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಹಾಕಲು ರಸ್ತೆ ಬದಿಯಲ್ಲಿ ತೋಡಿದ್ದ ಗುಂಡಿಗೆ ಬೀಳುವುದನ್ನು ತಪ್ಪಿಸುವ ಯತ್ನದಲ್ಲಿದ್ದ ಗೂಡ್ಸ್ ಆಟೋ ಚಾಲಕ ಬೈಕ್ಗೆ ಢಿಕ್ಕಿ ಹೊಡೆದ ಕಾರಣ ಬೈಕ್ನಲ್ಲಿದ್ದ ಇಬ್ಬರು ಮೃತಪಟ್ಟು, ಮತ್ತೋರ್ವ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.

ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಬೈಕ್ ಸವಾರರಾದ ನಿಂಬಳಗೆರೆಯ ಅನ್ಸರ್ (30), ಬಯಲುತುಂಬರಗುದ್ದಿ ಗ್ರಾಮದ ವೀರೇಶ್ (35) ಮೃತರು. ಮಣಿಕಂಠ ಗಾಯಗೊಂಡಿರುವವರು. ಗಾಯಗೊಂಡಿದ್ದ ಮೂವರನ್ನೂ ಸಮೀಪದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಪ್ರಾಥಮಿಕ ಚಿಕಿತ್ಸೆಯ ನಂತರ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲ ನೀಡದೇ ಇಬ್ಬರು ಮೃತಪಟ್ಟಿದ್ದು, ಮತ್ತೋರ್ವ ಚಿಕಿತ್ಸೆ ಪಡೆಯುತ್ತಿದ್ದಾನೆ.

ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳು ಗುಂಡಿ ಮುಚ್ಚಿಸುವಲ್ಲಿ ತೋರಿಸುತ್ತಿರುವ ನಿರ್ಲಕ್ಷö್ಯವೇ ಇಬ್ಬರ ಸಾವಿಗೆ ಕಾರಣ ಎಂದು ಗ್ರಾಮಸ್ಥರು - ಮೃತರ ಕುಟುಂಬದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾನಾಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 rajesh pande