ಎಎಸ್ಐ ಗುಂಡಿನ ದಾಳಿ:ಒಡಿಶಾ ಆರೋಗ್ಯ ಸಚಿವ ನಬಾ ದಾಸ್ ಸಾವು
ಝಾರಸುಗುಡ (ಒಡಿಶಾ), 29 ಜನವರಿ(ಹಿ.ಸ): ಆ್ಯಂಕರ್ ಒಡಿ ಎಎಸ್ ಐಯೊಬ್ಬರು ಗುಂಡಿನ ದಾಳಿ ನಡೆಸಿದ ಪರಿಣಾಮ ತೀವ್ರವಾಗಿ ಗ
ೇೇ


ಝಾರಸುಗುಡ (ಒಡಿಶಾ), 29 ಜನವರಿ(ಹಿ.ಸ):

ಆ್ಯಂಕರ್

ಒಡಿ ಎಎಸ್ ಐಯೊಬ್ಬರು ಗುಂಡಿನ ದಾಳಿ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಒಡಿಶಾ ರಾಜ್ಯದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್(61) ಮೃತಪಟ್ಟಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಸಚಿವ ನಬಾ ದಾಸ್ ಅವರ ದುರದೃಷ್ಟಕರ ಸಾವು ದುಃಖ ತಂದಿದೆ. ಇದೊಂದು ಆಘಾತ ಬೆಳವಣಿಗೆ ಆಗಿದೆ. ಅವರು ಸರ್ಕಾರ ಮತ್ತು ಪಕ್ಷ ಎರಡಕ್ಕೂ ಆಸ್ತಿಯಾಗಿದ್ದು, ದಾಸ್ ಸಾವು ಒಡಿಶಾ ರಾಜ್ಯಕ್ಕೆ ದೊಡ್ಡ ನಷ್ಟ ಎಂದಿದ್ದಾರೆ.

ಭಾನುವಾರ ಮಧ್ಯಾಹ್ನ 12:30 ಕ್ಕೆ ಝಾರಸುಗುಡ ಜಿಲ್ಲೆಯ ಬ್ರಜರಾಜನಗರ್ನ ಗಾಂಧಿ ಚಕ ಎಂಬಲ್ಲಿ ಪೊಲೀಸ್ ಅಧಿಕಾರಿ ಎಎಸ್ಐ ಗೋಪಾಲ್ ಚಂದ್ರ ದಾಸ್ ಎಂಬಾತ ಸಚಿವರ ಎದೆಗೆ ಗುಂಡು ಹಾರಿಸಿದ್ದರು. ಆನಂತರ ಅವರನ್ನು ಭುವನೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆದರೆ, ಚಿಕಿತ್ಸೆ ಫಲಕಾರಿ ಆಗದೆ, ಕೊನೆಯುಸಿರೆಳೆದಿದ್ದಾರೆ.

ಬಿಜು ಪಾಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರದಲ್ಲಿ ಪ್ರಬಲ ಸಚಿವರಲ್ಲೊಬ್ಬರೆನಿಸಿರುವ ನಬ ದಾಸ್ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕಾರಿನಿಂದ ಕೆಳಗಿಳಿಯುವಾಗ ಈ ದಾಳಿ ನಡೆದಿತ್ತು. ನಬ ದಾಸ್ ಅವರ ಎದೆಗೆ ಎರಡು ಗುಂಡುಗಳು ಹೊಕ್ಕಿವೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಝಾರಸುಗುಡ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದರು.

ನಬ್ ದಾಸ್ ಮೇಲೆ ಆರೋಪಿಯು ನಾಲ್ಕೈದು ಸುತ್ತು ಗುಂಡಿನ ದಾಳಿ ಮಾಡಿದ್ದಾನೆ. ಎರಡು ಗುಂಡಗಳು ಎದೆಗೆ ಹೊಕ್ಕಿವೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಆರೋಪಿಯಾಗಿರುವ ಎಎಸ್ಐ ಗೋಪಾಲ್ ಚಂದ್ರ ದಾಸ್ನನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಬ ಕಿಶೋರ್ ದಾಸ್ ಅವರು ಇತ್ತೀಚೆಗೆ ಮಹಾರಾಷ್ಟ್ರದ ಶನಿ ಶಿಂಗನಾಪುರ ದೇವಸ್ಥಾನಕ್ಕೆ ಒಂದು ಕೋಟಿ ರೂ ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಕಾಣಿಕೆಯಾಗಿ ನೀಡುವ ಮೂಲಕ ಸುದ್ದಿಯಲ್ಲಿದ್ದರು.

ಇನ್ನೂ, ನವ್ ಕಿಶೋರ್ ದಾಸ್ ಮೇಲೆ ನಡೆದ ದಾಳಿಯು ಪೂರ್ವಯೋಜಿತ ಕೃತ್ಯ ಎಂದು ಶಂಕಿಸಲಾಗಿದೆ. ಆದರೆ, ಯಾವ ಕಾರಣಕ್ಕಾಗಿ ಇವರ ಮೇಲೆ ಗುಂಡಿನ ದಾಳಿ ಮಾಡಲಾಯಿತು ಎಂಬುದು ಗೊತ್ತಾಗಿಲ್ಲ. ಚುನಾವಣೆಯ ಹೊಸ್ತಿಲಲ್ಲಿ ಈ ಘಟನೆ ನಡೆದಿರುವುದರಿಂದ ರಾಜಕೀಯದ ಕಮಟು ವಾಸನೆ ಇದೆ ಎಂಬ ಅಭಿಪ್ರಾಯ ಇದೆ.

ಒಡಿಶಾದಲ್ಲಿ 2024ರಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande