
ಎಮ್ಮಿಗನೂರು, 08 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಕುರುಗೋಡು ಉಪ ವಿಭಾಗ ವ್ಯಾಪ್ತಿಯ ಎಮ್ಮಿಗನೂರು ಶಾಖೆಯ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 3ನೇ ತ್ರೈಮಾಸಿಕ ನಿರ್ವಹಣಾ ಕಾರ್ಯವಿರುವುದರಿಂದ ಸೆ.10 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಐ.ಪಿ ಫೀಡರ್ ಮಾರ್ಗಗಳು ಬೆಳಿಗ್ಗೆ 4 ರಿಂದ 9 ಗಂಟೆ ವರೆಗೆ ವಿದ್ಯುತ್ ಸರಬರಾಜು ಆಗಲಿದೆ, ಇನ್ನುಳಿದ ಸಮಯವನ್ನು ಕಾರ್ಯ ಮುಗಿದ ನಂತರ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ನೀಡಲಾಗುವುದು.
ಗುತ್ತಿಗನೂರು, ಓರ್ವಾಯಿ, ಎಮ್ಮಿಗನೂರು, ಸೋಮಲಾಪುರ, ತಿಮ್ಮನಕೆರೆ, ತಾತರಾಜ್ ಕ್ಯಾಂಪ್, ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಬಾಳಾಪುರ, ಮೆಹೆಬೂಬ್ ನಗರ, ಕೊಟ್ಟಾಲ್, ಶಾಂತಿನಗರ, ಶಂಕರ್ ಸಿಂಗ್ ಕ್ಯಾಂಪ್, ಸುಬ್ಬರಾವ್ ಕ್ಯಾಂಪ್, ಹೆಚ್ ವೀರಾಪುರ, ಚಿಟಿಗನಾಳ್, ಪಟ್ಟಣಸೆರಗು ಮತ್ತು ರಾಮಚಂದ್ರಪುರ ಕ್ಯಾಂಪ್ನ ಕೃಷಿ ಪ್ರದೇಶಗಳು ಹಾಗೂ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್