ಕೋಲಾರ ಸಹಕಾರ ಒಕ್ಕೂಟದಿಂದ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡರಿಗೆ ಸನ್ಮಾನ
ಕೋಲಾರ ಸಹಕಾರ ಒಕ್ಕೂಟದಿಂದ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡರಿಗೆ ಸನ್ಮಾನ
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಜಿ.ಟಿ. ದೇವೇಗೌಡರನ್ನು ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದಿಂದ ಸನ್ಮಾನಿಸಲಾಯಿತು.


ಕೋಲಾರ, 08 ಸೆಪ್ಟೆಂಬರ್(ಹಿ.ಸ.)

ಆ್ಯಂಕರ್ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿಯಮಿತ ಬೆಂಗಳೂರು ಇದರ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಸಚಿವರೂ ಆದ ಜಿ.ಟಿ. ದೇವೇಗೌಡ ಹಾಗೂ ಉಪಾಧ್ಯಕ್ಷ ಶಿವಕುಮಾರ್ ಅವರನ್ನು ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಮಹಾಮಂಡಳದ ಅಧ್ಯಕ್ಷರನ್ನು ಸನ್ಮಾನಿಸಲು ಇಡೀ ಒಕ್ಕೂಟದ ಎಲ್ಲಾ ನಿರ್ದೇಶಕರು ತೆರಳಿದ್ದು, ಇದೇ ಸಂದರ್ಭದಲ್ಲಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಸಹಕಾರ ರಂಗದಿಂದಾಗುವ ಆರ್ಥಿಕ ಸಬಲೀಕರಣ, ಸಹಕಾರ ಸಂಘಗಳನ್ನು ಮುನ್ನಡೆಸಲು ಅಗತ್ಯವಾದ ಕಾನೂನುಗಳ ಪರಿಚಯ ಮತ್ತಿತರ ಅಂಶಗಳ ಕುರಿತು ಜಿಲ್ಲೆಯ ಸಹಕಾರಿ ಸಂಸ್ಥೆಗಳ ನೌಕರರು, ಕಾರ್ಯದರ್ಶಿಗಳಿಗೆ ಅರಿವು ಮೂಡಿಸಲು ಯೂನಿಯನ್ಗೆ ಹೆಚ್ಚಿನ ಅನುದಾನದ ಅಗತ್ಯವಿದ್ದು, ಒದಗಿಸಿಕೊಡಲು ಕೋರಿದರು.

ಸಹಕಾರ ಒಕ್ಕೂಟ ಕೋಲಾರ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸೊಸೈಟಿಗಳು, ಹಾಲು ಉತ್ಪಾಕರ ಸಹಕಾರ ಸಂಘಗಳು, ಎಸ್ಎಫ್ಸಿಎಸ್ಗಳು ಸೇರಿದಂತೆ ವಿವಿಧ ಮಾದರಿಯ ಸಹಕಾರ ಸಂಘಗಳ ಕಾರ್ಯದರ್ಶಿಗಳು, ನೌಕರರಿಗೆ ಅಗತ್ಯವಾದ ತರಬೇತಿ, ಮಾಹಿತಿ ಒದಗಿಸುವಲ್ಲಿ ಮುಖ್ಯಪಾತ್ರ ವಹಿಸಿದೆ. ಕೋಲಾರ ಜಿಲ್ಲಾ ಯೂನಿಯನ್ ಈಗಾಗಲೇದ ಸ0ಹಕಾರ ಶಿಕ್ಷಣ ಮತ್ತು ತರಬೇತಿ, ಸಹಕಾರಿ ಸಂಘಗಳ ಸದಸ್ಯರು, ನಿರ್ದೇಶಕರು ಮತ್ತು ಸಿಬ್ಬಂದಿಗೆ ಸಹಕಾರ ತತ್ವಗಳು ಮತ್ತು ನಿರ್ವಹಣೆಯ ಬಗ್ಗೆ ತರಬೇತಿ ಶಿಬಿರ ನಡೆಸುವುದು ಸೇರಿದಂತೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ಸಹಕಾರ ರಂಗವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.

ಅಖಿಲ ಭಾರತ ಸಹಕಾರ ಸಪ್ತಾಹ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಜಿಲ್ಲಾದ್ಯಂತ ವಿವಿಧ ಸಹಕಾರ ಸಂಘಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಆಯೋಜಿಸಿ ಸಹಕಾರ ತತ್ವಗಳನ್ನು ಸಮಾಜಕ್ಕೆ ತಲುಪಿಸುವ ಮತ್ತು ಸಹಕಾರ ರಂಗವನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಇಂತಹ ಕಾರ್ಯಗಳಿಗೆ ಹೆಚ್ಚಿನ ಅನುದಾನದ ಅಗತ್ಯತೆ ಕುರಿತು ಮನವಿ ಮಾಡಿದರು.

ಸಹಕಾರ ಜಾಗೃತಿ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಯುವ ಜನರಲ್ಲಿ ಸಹಕಾರಿ ಸಾಕ್ಷರತೆ ಮತ್ತು ಸರ್ಕಾರದ ಸಹಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುವ ಉದ್ದೇಶವಿದ್ದು, ಈ ಕಾರ್ಯಕ್ಕೆ ಹೆಚ್ಚಿನ ನೆರವಿನ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಗಳಾದ ಕಲ್ವ ಟಿ.ಕೆ. ಬೈರೇಗೌಡ, ಎಸ್ ವಿ ಗೋವರ್ಧನ್ ರೆಡ್ಡಿ, ನಲ್ಲೂರು ವಿ. ರಘುಪತಿ ರೆಡ್ಡಿ, ಅಣ್ಣಲ್ಲಿ ಎನ್. ನಾಗರಾಜು, ಕೆ.ಎಂ. ಮಂಜುನಾಥ್, ಎನ್. ಎಸ್. ಶಂಕರ್, ಕೆ ನಾರಾಯಣಗೌಡ, ಜಿ.ಸಿ. ಮಂಜುನಾಥ್ ರೆಡ್ಡಿ, ಬೆಟ್ಟ ಹೊಸಪುರ ಮುರಳಿಧರ ವಿ. ಎಸ್. ಆರ್. ಮುರಳಿಗೌಡ, ಒಕ್ಕೂಟದ ಸಿಬ್ಬಂದಿ ರವಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande