ಬಳ್ಳಾರಿ : ಆರ್ವೈಎಂಇಸಿಯಲ್ಲಿ ನವಸಂಗಮ
ಬಳ್ಳಾರಿ, 30 ಸೆಪ್ಟೆಂಬರ್ (ಹಿ.ಸ.) ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2026 - 27ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ `ನವಸಂಗಮ'' ಫ್ರೆಶ್ರ್ಸ್ ಡೇ ಬುಧವಾರ ನಡೆಯಿತು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯ
ಬಳ್ಳಾರಿ : ಆರ್ವೈಎಂಇಸಿಯಲ್ಲಿ `ನವಸಂಗಮ'


ಬಳ್ಳಾರಿ : ಆರ್ವೈಎಂಇಸಿಯಲ್ಲಿ `ನವಸಂಗಮ'


ಬಳ್ಳಾರಿ : ಆರ್ವೈಎಂಇಸಿಯಲ್ಲಿ `ನವಸಂಗಮ'


ಬಳ್ಳಾರಿ, 30 ಸೆಪ್ಟೆಂಬರ್ (ಹಿ.ಸ.)

ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2026 - 27ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ `ನವಸಂಗಮ' ಫ್ರೆಶ್ರ್ಸ್ ಡೇ ಬುಧವಾರ ನಡೆಯಿತು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಿಜಿಸ್ಟಾರ್ ಪ್ರೊ. ಡಾ. ವಿ. ಲೋಕೇಶ್ ಅವರು ಮುಖ್ಯ ಅತಿಥಿಗಳಾಗಿದ್ದರು. ಬೆಂಗಳೂರಿನ ಗೂಗಲ್ ಸಂಸ್ಥೆಯ ಇಂಜಿನಿಯರಿಂಗ್ ಪ್ರೋಗ್ರಾಂ ಮ್ಯಾನೇಜರ್ ಮತ್ತು ಆರ್ವೈಎಂಇಸಿಯ ಹಳೆಯ ವಿದ್ಯಾರ್ಥಿನಿ ಮಿಸ್ ಕೀರ್ತಿಶ್ರೀ ರೆಡ್ಡಿ ಅವರು ಅತಿಥಿಗಳಾಗಿದ್ದರು.

ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರು ಹಾಗೂ ಆರ್ವೈಎಂಇಸಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಾನೆಕುಂಟೆ ಬಸವರಾಜ, ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್. ಮಹಾಬಲೇಶ್ವರ, ಉಪಪ್ರಾಂಶುಪಾಲರಾದ ಡಾ. ಶ್ರೀಮತಿ ಸವಿತ ಸೊನೋಳಿ, ಪ್ರಥಮ ವರ್ಷದ ವಿದ್ಯಾರ್ಥಿಗಳ ಸಂಯೋಜಕರು ಹಾಗೂ ಸಿಎಸ್ಇ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್. ಗಿರೀಶ್, ಡೀನ್-ಅಕಾಡಮಿಕ್ ಡಾ. ಚಿತ್ರಿಕಿ ತೋಟಪ್ಪ, ಡೀನ್-ಪರೀಕ್ಷಾ ಡಾ. ಬಿ. ಶ್ರೀಪತಿ, ಐಕ್ಯೂಎಸಿ ಸಂಯೋಜಕರಾದ ಡಾ. ವೀರಭದ್ರಪ್ಪ ಆಲಗೂರು ಅವರು ವೇದಿಕೆಯಲ್ಲಿದ್ದರು.

ಶ್ರೀಮತಿ ಗಂಗಾ ಮಹೇಶ್ ಸಜ್ಜನ್ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ. ಬಿ. ಸುಮಂಗಳ ಅವರು ವಂದಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande