ಅರೆಕೆರೆ ಪಿಎಸ್ಐ ದುರ್ವರ್ತನೆ ಖಂಡಿಸಿ ಶ್ರೀರಂಗಪಟ್ಟಣ ಡಿವೈಎಸ್ಪಿ ಕಚೇರಿಗೆ ವಕೀಲರ ಮುತ್ತಿಗೆ
ಪ್ರತಿಭಟನೆ ವಾಪಸ್
arekere-psi-misbehavior-lawyers-protest-srirangapatna


ಶ್ರೀರಂಗಪಟ್ಟಣ,03 ಸೆಪ್ಟೆಂಬರ್(ಹಿ.ಸ.):

ಆ್ಯಂಕರ್:

ವಕೀಲರೊಬ್ಬರ ಜೊತೆ ಅರೆಕೆರೆ ಪೊಲೀಸ್ ಠಾಣೆಯ ಪಿಎಸ್ಐ ರವಿಕುಮಾರ್ ಅನುಚಿತವಾಗಿ ವರ್ತಿಸಿರುವುದನ್ನು ಖಂಡಿಸಿ, ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ವಕೀಲರ ಸಂಘದ ಪದಾಧಿಕಾರಿಗಳು ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದರು.

ಅರೆಕೆರೆ ಠಾಣೆ ಪಿಎಸ್ಐ ರವಿಕುಮಾರ್ ಅವರು ಕರ್ತವ್ಯದ ವೇಳೆ ವಕೀಲರೊಬ್ಬರೊಂದಿಗೆ ಅಸಭ್ಯವಾಗಿ ಮತ್ತು ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ವಕೀಲರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಹಾಗೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಡಿವೈಎಸ್ಪಿ ಕೃಷ್ಣಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ತೀವ್ರತೆ ಹೆಚ್ಚುತ್ತಿದ್ದಂತೆ ಎಚ್ಚೆತ್ತ ಹಿರಿಯ ಮೇಲಾಧಿಕಾರಿಗಳು ಪಿಎಸ್ಐ ರವಿಕುಮಾರ್ ಅವರಿಗೆ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು. ನಂತರ ಮೇಲಾಧಿಕಾರಿಗಳ ಸಮ್ಮುಖದಲ್ಲಿಯೇ ಪಿಎಸ್ಐ ರವಿಕುಮಾರ್ ವಕೀಲರ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದರು. ಈ ಬೆಳವಣಿಗೆಯ ಬಳಿಕ ವಕೀಲರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande