ಬಳ್ಳಾರಿ ಟಿಎಪಿಸಿಎಂಎಸ್ ನ ಶತಮಾನೋತ್ಸವ
ಬಳ್ಳಾರಿ, 25 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಬಳ್ಳಾರಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ 101ನೇ ವರ್ಷದ ಅಂಗವಾಗಿ ನೂತನ ಕಚೇರಿ ಕಟ್ಟಡದ ಉದ್ಘಾಟನೆ ಹಾಗೂ 2025-26ರ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯು ಯಶಸ್ವಿಯಾಗಿ ನಡೆಯಿತು. ಬಳ್ಳಾರಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸ
Centenary of Bellary TAPCMS


Centenary of Bellary TAPCMS


Centenary of Bellary TAPCMS


ಬಳ್ಳಾರಿ, 25 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಬಳ್ಳಾರಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ 101ನೇ ವರ್ಷದ ಅಂಗವಾಗಿ ನೂತನ ಕಚೇರಿ ಕಟ್ಟಡದ ಉದ್ಘಾಟನೆ ಹಾಗೂ 2025-26ರ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯು ಯಶಸ್ವಿಯಾಗಿ ನಡೆಯಿತು.

ಬಳ್ಳಾರಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾದ ಎ. ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸಂಘದಲ್ಲಿ ಇರುವ ಒಟ್ಟು 1173 ಸದಸ್ಯರ 9,56,746 ಷೇರು ಬಂಡವಾಳ ಮತ್ತು 17.87 ಲಕ್ಷ ರೂಪಾಯಿ ನಿವ್ವಳ ಲಾಭದ ಪತ್ರವನ್ನು ಮಂಡನೆ ಮಾಡಿದರು.

ಮಾಜಿ ಶಾಸಕರಾದ ಟಿ.ಎಂ. ಚಂದ್ರಶೇಖರಯ್ಯ ಅವರು, ಸಹಕಾರ ಸಂಘಗಳು ಸ್ವಂತ ವ್ಯವಹಾರ ಮಾಡಿ ಅಭಿವೃದ್ಧಿ ಹೊಂದಬೇಕು. ಕರ್ನಾಟಕ ಸಹಕಾರ ಮಾರಾಟ ಮಹಾ ಮಂಡಳ ನಿರ್ದೇಶಕರಾದ ಕೆ. ಅಮರೇಶ್ ಮತ್ತು ಸಂಜಯ್ ಪಾಟೀಲ್ ಅವರು, ಸಹಕಾರ ಸಂಘಗಳು ಹೆಚ್ಚಿನ ವ್ಯವಹಾರ ಖರೀದಿ ಕೇಂದ್ರ ತೆರೆದು ಕಮಿಷನ್ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.

ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾದ ಮೂಕಯ್ಯಸ್ವಾಮಿ ಮತ್ತು ಸಹಕಾರ ಯೂನಿಯನ್ ಅಧ್ಯಕ್ಷರಾದ ಜೆ.ಎಂ. ಶಿವಪ್ರಸಾದ್ ಅವರು ಶತಮಾನೋತ್ಸವವನ್ನು ಉದ್ಘಾಟಿಸಿದರು.

ಬಳ್ಳಾರಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ಎ. ಸಿದ್ದಲಿಂಗಪ್ಪ ಶ್ರೀಧರಗಡ್ಡೆ,

ಉಪಾಧ್ಯಕ್ಷರಾದ ಕೆ. ಅಂಜಿನಪ್ಪ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಕಾರ ಪ್ರಶಸ್ತಿ ಪುರಸ್ಕøತರು ಹಾಗೂ ಸಂಸ್ಥೆಯ ಮಾಜಿ ಅಧ್ಯಕ್ಷರುಗಳು - ಆಡಳಿತ ಮಂಡಳಿಯ ಮಾಜಿ ನಿರ್ದೇಶಕರುಗಳನ್ನು ಈ ಸಂದರ್ಭದಲ್ಲಿ ಗೌರವಿಸಿ ಅಭಿನಂದಿಸಲಾಯಿತು.

ಸಹಕಾರ ಸಂಘಗಳ ಅಧಿಕಾರಿಗಳು, ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗ್ಯಾನಪ್ಪ, ಸಹಕಾರ ಸಂಘಗಳ ಉಪನಿಬಂಧಕರಾದ ಜಿ.ಎಂ. ವೀರಭದ್ರಯ್ಯ ಅವರು ವೇದಿಕೆಯಲ್ಲಿದ್ದರು. ಜ್ಹೀ ಕನ್ನಡ ವಾಹಿನಿಯ ಕುಮಾರಿ ಜಯಲಕ್ಷ್ಮಿ ಸಂಗೀತ ಮೂಲಕ ಸ್ವರ ಮಾಧುರ್ಯವನ್ನು ಉಣಬಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande