ನಿರ್ಭೀತಿಯಿಂದ ದಾನ, ಜೀವ ರಕ್ಷಣೆ ಅತ್ಯುತ್ತಮ ದಾನ: ಪ್ರಧಾನಿ ಮೋದಿ
ನವದೆಹಲಿ, 02 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ನಿರ್ಭೀತಿಯಿಂದ ದಾನ ಮಾಡುವುದರ ಜತೆಗೆ ಜೀವ ರಕ್ಷಣೆಯ ಮಹತ್ವವನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಬುಧವಾರ ‘ಎಕ್ಸ್‌’ನಲ್ಲಿ ಸಂಸ್ಕೃತದ ಸುಭಾಷಿತವೊಂದನ್ನು ಹಂಚಿಕೊಂಡಿದ್ದು, “ಅಭಯಸ್ಯೈವ ಯೋ ದಾತಾ ತಸ್ಯೈವ ಸುಮಹತ್ಫಲಮ್‌
प्रधानमंत्री नरेन्द्र मोदी (फाइल फोटो)।


ನವದೆಹಲಿ, 02 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ನಿರ್ಭೀತಿಯಿಂದ ದಾನ ಮಾಡುವುದರ ಜತೆಗೆ ಜೀವ ರಕ್ಷಣೆಯ ಮಹತ್ವವನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಬುಧವಾರ ‘ಎಕ್ಸ್‌’ನಲ್ಲಿ ಸಂಸ್ಕೃತದ ಸುಭಾಷಿತವೊಂದನ್ನು ಹಂಚಿಕೊಂಡಿದ್ದು, “ಅಭಯಸ್ಯೈವ ಯೋ ದಾತಾ ತಸ್ಯೈವ ಸುಮಹತ್ಫಲಮ್‌. ನ ಹಿ ಪ್ರಾಣಸಮಂ ದಾನಂ ತ್ರಿಷು ಲೋಕೇಷು ವಿದ್ಯತೇ” ಎಂದು ತಿಳಿಸಿದ್ದಾರೆ.

ಇತರರ ಭಯವನ್ನು ದೂರ ಮಾಡಿ ಅವರಿಗೆ ಅಭಯ ನೀಡುವವರಿಗೆ ಮಹತ್ತರ ಫಲ ದೊರೆಯುತ್ತದೆ. ಮೂರು ಲೋಕಗಳಲ್ಲಿಯೂ ಜೀವ ರಕ್ಷಣೆಗಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ ಎಂಬುದು ಈ ಸುಭಾಷಿತದ ಅರ್ಥ. ಮಾನವ ಜೀವ ರಕ್ಷಣೆಯೇ ಅತ್ಯುನ್ನತ ದಾನ ಎಂದು ಪ್ರಧಾನಿ ಮೋದಿ ಸಂದೇಶ ನೀಡಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande